ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಮಾಜಿ ಅಗ್ನಿವೀರ್‌ಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಪ್ರಕಟಿಸಿದೆ.
ಅವರು ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನ ಭಾಗವಾಗಿದ್ದಾರೆಯೇ ಅಥವಾ ನಂತರದ ಬ್ಯಾಚ್‌ಗಳ ಭಾಗವಾಗಿದ್ದಾರೆಯೇ ಎಂಬುದನ್ನು ಅವಲಂಬಿಸಿ ಉನ್ನತ ವಯಸ್ಸಿನ ಮಿತಿಯನ್ನು ಸಡಿಲಿಸುವಂತೆ ಸಚಿವಾಲಯವು ಸೂಚನೆ ನೀಡಿದೆ.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಆಕ್ಟ್, 1968, (1968 ರ 50) ಅಡಿಯಲ್ಲಿ ಮಾಡಲಾದ ನಿಯಮಗಳನ್ನು ತಿದ್ದುಪಡಿ ಮಾಡಿದ ನಂತರ ಅಧಿಸೂಚನೆಯ ಮೂಲಕ ಘೋಷಣೆ ಮಾಡಲಾಗಿದೆ. “ಖಾಲಿ ಹುದ್ದೆಗಳಲ್ಲಿ ಶೇಕಡಾ ಹತ್ತರಷ್ಟು ಮಾಜಿ ಅಗ್ನಿವೀರ್‌ಗಳಿಗೆ ಮೀಸಲಿಡಲಾಗುವುದು” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮಾಜಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಐದು ವರ್ಷಗಳವರೆಗೆ ಮತ್ತು ಇತರ ಬ್ಯಾಚ್‌ಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳವರೆಗೆ ಗರಿಷ್ಠ ವಯೋಮಿತಿ ಸಡಿಲಿಸಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮಾಜಿ ಅಗ್ನಿವೀರ್‌ಗಳಿಗೂ ದೈಹಿಕ ದಕ್ಷತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮೊದಲ ಬ್ಯಾಚ್‌ನ ಮಾಜಿ ಅಗ್ನಿವೀರ್‌ಗಳಿಗೆ ಐದು ವರ್ಷಗಳವರೆಗೆ ಮತ್ತು ನಂತರದ ಬ್ಯಾಚ್‌ಗಳಿಗೆ ಮೂರು ವರ್ಷಗಳವರೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಸಡಿಲಿಸಲಾಗಿದ್ದು, ಹೆಚ್ಚುವರಿಯಾಗಿ, ಮಾಜಿ ಅಗ್ನಿವೀರ್‌ಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಅಂದ್ರೆ, ದೈಹಿಕ ಪರೀಕ್ಷೆಗೆ ಒಳಪೆಬೇಕಾಗಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ಮೂಲದ ಸಂಸ್ಥೆಯಿಂದ ಇಂದು ಉದ್ಯೋಗಿಗಳಿಗೆ ʻನಿದ್ರೆಯ ಉಡುಗೊರೆʼ… ಕಾರಣ ಇಲ್ಲಿದೆ
ಬೆಂಗಳೂರು ಮೂಲದ ಸಂಸ್ಥೆಯಿಂದ ಇಂದು ಉದ್ಯೋಗಿಗಳಿಗೆ ʻನಿದ್ರೆಯ ಉಡುಗೊರೆʼ… ಕಾರಣ ಇಲ್ಲಿದೆ