ಸುಭಾಷಿತ :

Tuesday, January 28 , 2020 2:08 PM

ಫೇಸ್‌ಬುಕ್ ಮೆಸೆಂಜರ್‌ ನಲ್ಲಿ ಡಾರ್ಕ್ ಮೋಡ್‌ ಆಯ್ಕೆ ಸೇರ್ಪಡೆ


Wednesday, April 17th, 2019 1:21 pm

ಸ್ಪೆಷಲ್ ಡೆಸ್ಕ್ : ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಮೆಸೆಂಜರ್‌ ಆ್ಯಪ್‌ನಲ್ಲಿ ಡಾರ್ಕ್ ಮೋಡ್‌ ಅನ್ನು ಕೆಲ ಬಳಕೆದಾರರಿಗೆ ಪರಿಚಯಿಸಿದೆ.

ಈಸ್ಟರ್ ಎಗ್ ಆ್ಯಕ್ಟಿವೇಷನ್ ಮಾಡಿದ ತಿಂಗಳ ಬಳಿಕ ಇದೀಗ ಮೆಸೆಂಜರ್‌ನಲ್ಲಿ ಡಾರ್ಕ್ ಮೋಡ್‌ ಅನ್ನು ಪರಿಚಯಿಸಲು ಹರ್ಷ ವ್ಯಕ್ತಪಡಿಸುತ್ತೇವೆ. ಸೆಟ್ಟಿಂಗ್ಸ್‌ನಲ್ಲಿ ಸುಲಭವಾಗಿ ಡಾರ್ಕ್ ಮೋಡ್ ಅನ್ನು ಬಳಕೆದಾರರು ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ವಿಶ್ವದಾದ್ಯಂತ ಏಪ್ರಿಲ್ 16,2019ರಂದು ಪರಿಚಯಗೊಳ್ಳುತ್ತಿದೆ” ಎಂದು ಫೇಸ್‌ಬುಕ್‌ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.

ಫೇಸ್‌ಬುಕ್‌ ಮೆಸೆಂಜರ್ ಆ್ಯಪ್‌ನಲ್ಲಿ ಡಾರ್ಕ್ ಮೋಡ್‌ ಆ್ಯಕ್ಟಿವೇಟ್ ಹೀಗೆ ಮಾಡಿ :
ಫೇಸ್‌ಬುಕ್‌ ಮೆಸೆಂಜರ್ ಆ್ಯಪ್‌ ತೆರೆಯಿರಿ -> ಸೆಟ್ಟಿಂಗ್ಸ್‌ಗೆ ಹೋಗಿ -> ಡಾರ್ಕ್ ಮೋಡ್‌ ಸ್ವಿಚ್ ಅನ್ನು ಆನ್‌ ಮಾಡಿ

ಮೆಸೆಂಜರ್‌ನ ಡಾರ್ಕ್‌ ಮೋಡ್‌ ಕಡಿಮೆ ಹೊಳಪನ್ನು ಒದಗಿಸುತ್ತದೆ ಆದರೆ ಕಾಂಟ್ರಾಸ್ಟ್‌ ಮತ್ತು ವೈಬ್ರೆನ್ಸಿಯನ್ನು ನಿರ್ವಹಿಸುತ್ತದೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.

ಫೇಸ್‌ಬುಕ್‌ ಹಾಗೂ ಮೆಸೆಂಜರ್‌ ಆ್ಯಪ್‌ ಅನ್ನು ವಿಲೀನಗೊಳಿಸುವ ನಿಟ್ಟಿನಲ್ಲಿ ಫೇಸ್‌ಬುಕ್‌ ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ, ಈ ವಿಚಾರದ ಬಗ್ಗೆ ಫೇಸ್‌ಬುಕ್‌ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions