ಅಪಪ್ರಚಾರ ಕರಿತು ನಟಿ ಮೇಘನಾ ಬೇಸರ: ಏನೇ ಮಾಹಿತಿ ಇದ್ದರೂ, ಸ್ವತಃ ನಾನೇ ತಿಳಿಸುತ್ತೇನೆ ಎಂದ ಚಿರು ಪತ್ನಿ..! – Kannada News Now


State

ಅಪಪ್ರಚಾರ ಕರಿತು ನಟಿ ಮೇಘನಾ ಬೇಸರ: ಏನೇ ಮಾಹಿತಿ ಇದ್ದರೂ, ಸ್ವತಃ ನಾನೇ ತಿಳಿಸುತ್ತೇನೆ ಎಂದ ಚಿರು ಪತ್ನಿ..!

ಡಿಜಿಟಲ್‌ ಡೆಸ್ಕ್‌: ಸ್ಯಾಂಡಲ್​ವುಡ್ ನಟ ಚಿರು ಸರ್ಜಾ ಅಕಾಲಿಕ ಮರಣ ಕುಟುಂಬವನ್ನಷ್ಟೇ ಅಲ್ಲ ಚಿತ್ರರಂಗ ಸೇರಿ ಆಭಿಮಾನಿಗಳ ಅಪಾರ ನೋವಿಗೆ ಕಾರಣವಾಗಿತ್ತು. ಚಿರು ಕಣ್ಮಚ್ಚಿ ತಿಂಗಳುಗಳು ಉರುಳುತ್ತಿದ್ರು ಅವ್ರ ಕುಟುಂಬ ಮಾತ್ರ ದುಃಖದಿಂದ ಹೊರ ಬಂದಿಲ್ಲ. ಈ ಮಧ್ಯೆ ಚಿರು ನೆನಪಲ್ಲೇ ಇರೋ ಮೇಘನಾ ಸರ್ಜಾ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ, ಅದರಲ್ಲೂ ಯುಟ್ಯೂಬ್​ನಲ್ಲಿ ಕೆಲವರು ವೀವ್ಸ್ ಮತ್ತು ಲೈಕ್​ಗೋಸ್ಕರ ಇಲ್ಲಸಲ್ಲದ ನ್ಯೂಸ್ ಹರಿಬಿಡ್ತಿದ್ದಾರೆ. ಚಿರು ನೆನಪಲ್ಲೇ ಕಾಲ ಕಳೆಯುತ್ತಿರುವ ಮೇಘನಾ ಸರ್ಜಾ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಮೇಘನಾ
ಇನ್ಸ್​ಟಾಗ್ರಾಮ್​ನಲ್ಲಿ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಿರಿಯ ವಿದ್ವಾಂಸ ʼಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ʼ ಇನ್ನಿಲ್ಲ..!

ಇನ್ಸ್​ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಹಾಕಿ ಬರೆದುಕೊಂಡಿರೋ ಮೇಘನಾ, “ಎಲ್ಲರಿಗೂ ನಮಸ್ಕಾರ.. ನನ್ನ ಬಗ್ಗೆ ಹಾಗೂ ನನ್ನ ಫ್ಯಾಮಿಲಿ ಬಗ್ಗೆ ಕೆಲ ಯುಟ್ಯೂಬ್ ಚಾನೆಲ್​ಗಳು ವೀವ್ಸ್​​ಗೋಸ್ಕರ ಫೇಕ್ ನ್ಯೂಸ್ ಹಾಕ್ತಿದ್ದಾರೆ. ನನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ ಯಾರೂ ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ. ಈ ಎಲ್ಲದರ ಬಗ್ಗೆಯೂ ನಾನು ಆದಷ್ಟು ಬೇಗ ಮಾತನಾಡುತ್ತೇನೆ. ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ಏನೇ ಮಾಹಿತಿ ಇದ್ದರೂ, ಸ್ವತಃ ನಾನೇ ತಿಳಿಸುತ್ತೇನೆ” ಎಂದಿದ್ದಾರೆ.

BIGG NEWS : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ಸಿಸಿಬಿಯಿಂದ ‘ನಿರೂಪಕಿ ಅನುಶ್ರೀ’ಗೂ ನೋಟಿಸ್
error: Content is protected !!