ಅಮೆರಿಕ: ಅಮೇರಿಕಾದಲ್ಲಿ ಭೀಕರ ಹಿಮಪಾತ ಸಂಭವಿಸುತ್ತಿದೆ. ಇದರಿಂದ ಅಮೇರಿಕಾ ಜನರು ತತ್ತರಿಸಿ ಹೋಗಿದ್ದಾರೆ.

BIGG NEWS: ಇಂದಿನಿಂದ ವಾಯುವ್ಯ ಭಾರತದಲ್ಲಿ ಶೀತಗಾಳಿ ಕಡಿಮೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

ಅಮೆರಿಕಾದಲ್ಲಿ ಈವರೆಗೆ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೆಚ್ಚು ಹಿಮಪಾತದಿಂದ ಬಫಲೋ ಪ್ರಾಂತ್ಯದಲ್ಲಿ ಹಿಮಪಾತದಿಂದ ಜನರು ಸಾವನ್ನಪ್ಪಿದ್ದಾರೆ. ಭಾರಿ ಹಿಮಪಾತದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಅಮೆರಿಕಾದ ಹಲವೆಡೆ 15,000 ವಿಮಾನಗಳ ಸಂಚಾರ ರದ್ದಾಗಿದೆ.

BIGG NEWS: ಇಂದಿನಿಂದ ವಾಯುವ್ಯ ಭಾರತದಲ್ಲಿ ಶೀತಗಾಳಿ ಕಡಿಮೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

 

ಚಳಿಗಾಲದ ಚಂಡಮಾರುತದ ಆರ್ಭಟಕ್ಕೆ ಅಮೆರಿಕ ತತ್ತರಿಸಿದ್ದು, ದೇಶದಾದ್ಯಂತ 60 ಜನರನ್ನು ಬಲಿ ಪಡೆದಿದೆ. ಅಮೆರಿಕದ ಹಿಮಪಾತದಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಬಿರುಗಾಳಿಗೆ ಸಿಲುಕಿ ಲಕ್ಷಾಂತರ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ.
ನ್ಯೂಯಾರ್ಕ್‌ನ ಬಫಲೋ ಚಂಡಮಾರುತದ ದಾಳಿಗೆ ತುತ್ತಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೂ ಕೂಡ ತಡೆಯುಂಟುಮಾಡಿದೆ. ಹಿಮಪಾತದಿಂದ ನ್ಯೂಯಾರ್ಕ್​ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ.

Share.
Exit mobile version