BREAKING: ಆನೇಕಲ್ ನಲ್ಲಿ ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ಬೃಹತ್ ತೇರು, ತಪ್ಪಿದ ಭಾರೀ ಅನಾಹುತ

ಆನೇಕಲ್: ನಗರದ ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿಯಲ್ಲಿ ನಡೆದಂತ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಬೃಹತ್ ಗಾತ್ರದ ತೇರು ಕುಸಿದು ಬಿದ್ದಿರುವಂತ ಘಟನೆ ನಡೆದಿದೆ. ಆದ್ರೇ ಯಾವುದೇ ಅನಾಹುತ ಸಂಭವಿಸಿಲ್ಲ. ಆನೇಕಲ್ ತಾಲೂಕಿನ ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿಯಲ್ಲಿ ಹುಸ್ಕೂರ್ ಮದ್ದೂರಮ್ಮ ಜಾತ್ರೆಯನ್ನು ನಡೆಸಲಾಗುತ್ತಿತ್ತು. ಈ ಜಾತ್ರೆಯಲ್ಲಿ ಎತ್ತು, ಟ್ರ್ಯಾಕ್ಟರ್ ನೆರವಿನಿಂದ ಎಳೆಯುತ್ತಿದ್ದಂತ ಸಂದರ್ಭದಲ್ಲಿ, ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. 120 ಅಡಿ ಎತ್ತರದ ಹುಸ್ಕೂರು ಮದ್ದೂರಮ್ಮ ದೇವಿಯ ತೇರು, ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ … Continue reading BREAKING: ಆನೇಕಲ್ ನಲ್ಲಿ ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ಬೃಹತ್ ತೇರು, ತಪ್ಪಿದ ಭಾರೀ ಅನಾಹುತ