ಸುಭಾಷಿತ :

Monday, February 17 , 2020 5:14 AM

ಒಲಿಂಪಿಕ್​ ಅರ್ಹತಾ ಟೂರ್ನಿಗೆ ಮೇರಿಕೋಮ್ ಪ್ರವೇಶ​


Saturday, December 28th, 2019 4:35 pm

ನವದೆಹಲಿ : ಶನಿವಾರ ಒಲಿಂಪಿಕ್ ಅರ್ಹತಾ ಟೂರ್ನಿಗಾಗಿ ನಡೆದ ಟ್ರಯಲ್ಸ್​ ಫೈನಲ್​ನಲ್ಲಿ ನಿಖಾತ್ ಝರೀನ್ ಅವರನ್ನು 9-1ರ ಅಂತರದಲ್ಲಿ ಮಣಿಸಿ ಚೀನಾದಲ್ಲಿ ನಡೆಯುವ ಒಲಿಂಪಿಕ್​ ಅರ್ಹತಾ ಟೂರ್ನಿಗೆ ಆಯ್ಕೆಯಾದರು.

ಈ ಹಿಂದೆ, ಟೋಕಿಯೊ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಸ್ಪರ್ಧಿಸಲು ‘ನ್ಯಾಯಯುತ ಅವಕಾಶ’ ನೀಡುವಂತೆ ಜರೀನ್ ಒತ್ತಾಯಿಸಿದ್ದರು. ವಿಶ್ವಕಪ್‌ನಿಂದ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತರಿಗೆ ವಿನಾಯಿತಿ ನೀಡುವ ನಿಯಮವನ್ನು ಬದಲಾಯಿಸುವ ಮೂಲಕ ವಿಶ್ವ ಚಾಂಪಿಯನ್ ಕೋಮ್‌ಗೆ ಅವಕಾಶ ಕಲ್ಪಿಸುವ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ (ಬಿಎಫ್‌ಐ) ನಿರ್ಧಾರವನ್ನು ಪ್ರಶ್ನಿಸಿ ಅಕ್ಟೋಬರ್ 17 ರಂದು ಜರೀನ್ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಮೇರಿ ಕೋಮ್​ ಒಪ್ಪಿಗೆಯ ಮೇರೆಗೆ ಇಂದು ನಡೆದ ಟ್ರಯಲ್ಸ್​ ಪಂದ್ಯದಲ್ಲಿ ಅನುಭವಿ ಮೇರಿಕೋಮ್​ ಯುವ ಬಾಕ್ಸರ್​ ಝರೀನ್​ರನ್ನು 9-1 ಅಂಕಗಳಿಂದ ಸುಲಭವಾಗಿ ಮಣಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions