ನವದೆಹಲಿ: ಈಗಾಗಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣದಿಂದಾಗಿ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸೋದಾಗಿ ವಾಹನ ತಯಾರಿಕಾ ಕಂಪನಿಗಳು ಕಳೆದ ವರ್ಷವೇ ಘೋಷಣೆ ಮಾಡಿದ್ದವು. ಅದರ ಭಾಗವಾಗಿ ಮಾರುತಿ ಸುಜುಕಿ ತನ್ನ ವಾಹನ ಬೆಲೆ ಶೇ.4.3ಕ್ಕೆ ಏರಿಕೆ ಮಾಡಿದೆ. ಈ ಮೂಲಕ ವಾಹನ ಖರೀದಿದಾರರಿಗೆ ಬಿಗ್ ಶಾಕ್ ನೀಡಿದೆ.
ದೇವರಿಗೆ ಹೋದವರಿಗೆ ‘ಸಾವಿನ ದರ್ಶನ’: ಒಂದೇ ಕುಟುಂಬದ ನಾಲ್ವರು ‘ದುರಂತ ಅಂತ್ಯ’
ಈ ಕುರಿತಂತೆ ಶನಿವಾರ ಮಾಹಿತಿಯನ್ನು ಪ್ರಕಟಿಸಿರುವಂತ ಮಾರುತಿ ಸುಜಿಕಿ ಕಂಪನಿಯು, ಉತ್ಪಾದನಾ ಸಾಮಗ್ರಿಗಳ ಬೆಲೆಗಳ ಏರಿಕೆಯನ್ನು ಸರಿದೂಗಲು, ತನ್ನ ವಾಹನಗಳ ಬೆಲೆಗಳನ್ನು ಶೇ.0.1 ರಿಂದ ಶೇ.4.3ವರೆಗೆ ಮಾರುತಿ ಸುಜುಕಿ ಕಂಪನಿ ಏರಿಕೆ ಮಾಡಿರೋದಾಗಿ ತಿಳಿಸಿದೆ.
ನೂತನ ಬೆಲೆ ಏರಿಕೆಯ ದರಗಳು ನಿನ್ನೆಯಿಂದಲೇ ಜಾರಿಗೆ ಬಂದಿದ್ದು, ವಿವಿಧ ಮಾಡೆಲ್ ಗಳ ಎಕ್ಸ್ ಷೋ ರೂ ( ದೆಹಲಿ ) ವೇಯ್ಟೆಡ್ ಆವರೇಜ್ ಬೆಲೆಗಳು ಶೇ.1.7ರಷ್ಟು ಏರಿಕೆಯಾಗಿವೆ. ಕಳೆದ ವರ್ಷ ಮೂರು ಬಾರಿ ಬೆಲೆ ಏರಿಕೆ ಮಾಡಿದ್ದಂತ ಮಾರುತಿ ಸುಜುಕಿ, ಈ ವರ್ಷದ ಆರಂಭದಲ್ಲೇ ಮತ್ತೆ ಬೆಲೆ ಏರಿಕೆ ಮಾಡಿರೋದು, ವಾಹನ ಖರೀದಿದಾರರಿಗೆ ಮತ್ತಷ್ಟು ಹೊರೆಯಾಗುವಂತೆ ಮಾಡಿದೆ.