ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದಂತ ಆಟೋದಲ್ಲಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ಐಎ ಚುರುಕುಗೊಳಿಸಿದೆ. ಇಂದು ಈ ಸಂಬಂಧ ನಗರದಲ್ಲಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಪ್ರಕರಣ ಸಂಬಂಧ ಪಿ.ಎ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ.

ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟಕ ಪ್ರಕರಣ ಸಂಬಂಧ ಉಗ್ರ ಶಾರಿಕ್ ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆತ ನೀಡಿದಂತ ಮಾಹಿತಿಯ ಆಧಾರ ಮೇಲೆ ಇಂದು ಪಿ ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ 7 ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದ್ದಾರೆ.

ಇದೀಗ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹಲವು ಮಹತ್ವದ ಮಾಹಿತಿಯನ್ನು ಕಲೆಹಾಕುವ ಕೆಲಸದಲ್ಲಿ ಎನ್ಐಎ ಅಧಿಕಾರಿಗಳು ನಿರತರಾಗಿರೋದಾಗಿ ತಿಳಿದು ಬಂದಿದೆ.

ಶಾರಿಕ್ ನೀಡಿದಂತ ಮಾಹಿತಿಯ ಆಧಾರದ ಮೇಲೆ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಂತ ಉಡುಪಿ ಮೂಲಕ ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನು ಎನ್ಐಎ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಈತ ಶಿವಮೊಗ್ಗದಲ್ಲಿ ನಡೆದಿದ್ದಂತ ಟ್ರಯಲ್ ಬ್ಲಾಸ್ಟ್ ಸೇರಿದಂತೆ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಅಂದಹಾಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ತುಂಗಾದಡದಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ಮಾಜ್ ಮುನೀರ್ ಬಂಧಿಸಿದ್ದರು. ಈ ಪ್ರಕರಣವನ್ನು ಸರ್ಕಾರ ಎನ್ಐಎಗೆ ವಹಿಸಿತ್ತು. ಈ ಸಂಬಂಧ ತನಿಖೆ ನಡೆಸಿದ್ದಂತ ಎನ್ಐಎ ಅಧಿಕಾರಿಗಳು, ಮಾಜ್ ಜೊತೆಗೆ ಉಗ್ರರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಂತ ಮಂಗಳೂರಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದಂತ ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನು ವಶಕ್ಕೆ ಪಡೆದಿದೆ. ಈ ಸಂಬಂಧ ತನಿಖೆ ಮುಂದುವರೆಸಿದೆ.

ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ – ಡಾ. ಎಚ್.ಎಲ್. ಪುಷ್ಪಾ ಕಿಡಿ

ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್: #BJPHatePolitics ‘ಟ್ವಿಟ್ಟರ್ ಟ್ಯಾಗ್’ನಲ್ಲಿ ಕಾಂಗ್ರೆಸ್ ಕುಟುಕು

BIGG NEWS: ದಶಪಥ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ನಿಲುಗಡೆಯಾಗಬೇಕು : ಮಾಜಿ ಸಚಿವ ಸಿ.ಪಿ. ಯೋಗೇಶ್ವರ್

BREAKING NEWS: ಕುಕ್ಕರ್ ಬಾಂಬ್ ಪ್ರಕರಣ: ಎನ್ಐಎಯಿಂದ ಮಂಗಳೂರಿನ ಪಿ ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ

Share.
Exit mobile version