ಸುಭಾಷಿತ :

Tuesday, January 28 , 2020 2:08 PM

ಮನೆ ಮಾರಾಟಕ್ಕಿಟ್ಟು ಮತ್ತೆ ಸುದ್ದಿಯಾದ ‘ಶ್ರುತಿಹರಿಹರನ್’!


Tuesday, November 12th, 2019 8:29 pm

ಸಿನಿಮಾಡೆಸ್ಕ್‌: ತಾರಕ್‌ನಂಥಾ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾಗಿ ನಟಿಸಿದ್ದವರು ಶ್ರುತಿ ಹರಿಹರನ್. ಸದಾ ಭಿನ್ನವಾದ ಕಥೆಗಳಿಗೆ, ಪಾತ್ರಗಳಿಗೆ ಹಾತೊರೆಯುವ ಸ್ವಭಾವದ ಶ್ರುತಿ ಸೀಮಿತ ಚಿತ್ಚರಗಳಲ್ಲಿಯೇ ತಾನೆಂಥಾ ಪ್ರತಿಭಾವಂತ ನಟಿ ಅನ್ನೋದನ್ನು ಸಾಬೀತುಗೊಳಿಸಿದ್ದರು. ಆದರೆ ಕೆಲ ವಿವಾದಗಳು ಮತ್ತು ವೈಯಕ್ತಿಕ ಕಾರಣಗಳಿಂದ ಅವರು ಸಂಸಾರಸ್ಥೆಯಾಗಿ ವಿದೇಶದಲ್ಲಿ ನೆಲೆಸಿದ್ದರು. ಈ ಮೂಲಕವೇ ಚಿತ್ರರಂಗದಿಂದ ಒಂದಂತರ ಕಾಯ್ದುಕೊಂಡಿದ್ದ ಶ್ರುತಿ ಬಣ್ಣದ ನಂಟನ್ನು ಪರ್ಮನೆಂಟಾಗಿಯೇ ಕಳಚಿಕೊಳ್ಳುತ್ತಾರಾ ಅಂತೊಂದು ಆತಂಕ ಆಕೆಯನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಇದನ್ನು ನೀಗಿಸುವಂತೆ ಅವರು ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಮತ್ತೆ ಆಗಮಿಸಿದ್ದಾರೆ.

ಶ್ರುತಿ ಹರಿಹರನ್ ಈಗ ಮನೆ ಮಾರಾಟಕ್ಕಿಟ್ಟು ಸುದ್ದಿ ಕೇಂದ್ರದಲ್ಲಿದ್ದಾರೆ. ಅಷ್ಟಕ್ಕೂ ಒಂದು ಕಾಮಿಡಿ ಚಿತ್ರದಲ್ಲಿ, ಅಂಥಾದ್ದೇ ಶೇಡಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದೆಂದರೆ ಮಾಮೂಲು ಜಾಡಿನ ಸಿನಿಮಾ ನಟ ನಟಿಯರ ಪಾಲಿಗೆ ಮಹಾ ಸವಾಲು. ಅಂಥಾದ್ದೊಂದು ಸವಾಲನ್ನು ಶ್ರುತಿ ಕೂಡಾ ಸ್ವೀಕರಿಸಿದ್ದಾರಾ ಅನ್ನೋದಕ್ಕೆ ಚಿತ್ರತಂಡ ನಿಖರ ಉತ್ತರವನ್ನೇನೂ ಕೊಡೋದಿಲ್ಲ. ಆದರೆ ಅವರ ಪಾತ್ರ ಸರ್‌ಪ್ರೈಸ್‌ನಂತೆ ಮೂಡಿ ಬಂದಿರೋದಂತೂ ಸತ್ಯ. ಸದ್ಯಕ್ಕೆ ಶ್ರುತಿ ಪಾತ್ರದ ಬಗ್ಗೆ ಚಿತ್ರತಂಡ ಬಿಟ್ಟುಕೊಟ್ಟಿರೋದು ಒಂದೇ ಒಂದು ಮಾಹಿತಿಯನ್ನು ಮಾತ್ರ. ಅದರ ಪ್ರಕಾರ ಹೇಳೋದಾದರೆ ಅವರಿಲ್ಲಿ ಮಾರಾಟಕ್ಕಿಟ್ಟಿರೋ ಮನೆ ಓನರ್ ಆಗಿ ನಟಿಸಿದ್ದಾರೆ.

ಶ್ರುತಿ ಪಾಲಿಗೆ ಮನೆ ಮಾರಾಟಕ್ಕಿದೆ ಚಿತ್ರ ಗ್ರ್ಯಾಂಡ್ ಎಂಟ್ರಿಯಂತೆ ಮೂಡಿ ಬಂದಿದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಇಲ್ಲಿನ ಪ್ರತೀ ಪಾತ್ರವನ್ನೂ ಕೂಡಾ ನಿರ್ದೇಶಕ ಮಂಜು ಸ್ವರಾಜ್ ಇಂಥಾ ವಿಶೇಷತೆಗಳೊಂದಿಗೇ ರೂಪಿಸಿದ್ದಾರಂತೆ. ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡರ ಪಾತ್ರಗಳೂ ಕೂಡಾ ಅದೇ ರೀತಿಯಲ್ಲಿ ಮೂಡಿ ಬಂದಿವೆಯಂತೆ. ಅದರಲ್ಲಿಯೂ ವಿಶೇಷವಾಗಿ ಶ್ರುತಿ ಹರಿಹರನ್ ಪಾತ್ರ ಮಾಹಾ ಮೋಡಿಯನ್ನೇ ಮಾಡಲಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions