ಮಾರಾಟಕ್ಕಿರೋ ಮನೆ ಮತ್ತು ಭೂತ ಬಾಧೆ!
Thursday, November 14th, 2019 6:48 pm

ಸ್ಪೆಷಲ್ಡೆಸ್ಕ್: ಈ ದೆವ್ವ ಭೂತ, ಪ್ರೇತಾತ್ಮಗಳ ಬಗೆಗಿನ ಚಿತ್ರ ವಿಚಿತ್ರವಾದ ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಹಾರರ್ ಸನ್ನಿವೇಶಗಳೇ ಪ್ರಧಾನವಾಗಿರೋ ಸಿನಿಮಾಗಳು ಅಡಿಗಡಿಗೆ ರೂಪುಗೊಳ್ಳುತ್ತಿರುತ್ತವೆ. ಕನ್ನಡದ ಪ್ರೇಕ್ಷಕರಲ್ಲಿ ಈ ಜಾನರ್ ಸಿನಿಮಾಗಳ ಬಗ್ಗೆ ಇರೋ ಕ್ರೇಜ್ ಅದಕ್ಕೆ ಕಾರಣ. ಕೊಂಚ ಹೊಸತನದಿಂದ ಕೂಡಿದ್ದರೂ ಹಾರರ್ ಚಿತ್ರಗಳು ಸಲೀಸಾಗಿ ಗೆಲುವು ಕಂಡು ಬಿಡುತ್ತವೆ. ಹಾಗಿರುವಾಗ ಹಾರರ್ ಸನ್ನಿವೇಶಗಳೊಂದಿಗೆ ಭರ್ಜರಿ ಕಾಮಿಡಿಯನ್ನೂ ಒಳಗೊಂಡಿರುವ ಮನೆ ಮಾರಾಟಕ್ಕಿದೆ ಎಂಬ ಚಿತ್ರ ಗೆಲುವು ಕಾಣದಿರಲು ಸಾಧ್ಯವೇ?
ಯಾರಿಗೇ ಆದರೂ ಈ ವೆರೈಟಿಯ ಸಿನಿಮಾಗಳು ಇಷ್ಟವಾಗದಿರಲು ಸಾಧ್ಯವೇ ಇಲ್ಲ. ಕೆಲವರಿಗೆ ಹಾರರ್ ಸನ್ನಿವೇಶಗಳೇ ಕಾಮಿಡಿಯಂತೆ ಕಾಣುತ್ತವೆ. ಇನ್ನು ಕೆಲ ಮಂದಿ ಇಂಥವನ್ನು ಕಂಡು ಒಳಗೊಳಗೇ ಬೆವರಾಡುತ್ತಾರೆ. ಹಾಗಿರುವಾಗ ಭೂತ ಬಾಧೆಯ ಜೊತೆಗೆ ಕಾಮಿಡಿ ಹಂಗಾಮಾ ಕೂಡಾ ಸೇರಿಕೊಂಡದೆ ಅದು ಸಮಸ್ತ ಪ್ರೇಕ್ಷಕರಿಗೂ ರುಚಿಸದಿರಲು ಸಾಧ್ಯವಿಲ್ಲ.
ನಿರ್ದೇಶಕ ಮಂಜು ಸ್ವರಾಜ್ ಅಂಥಾದ್ದೇ ಸಮ್ಮೋಹಕ ಸ್ವರೂಪದಲ್ಲಿ ಮನೆ ಮಾರಾಟಕ್ಕಿದೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರಂತೆ. ಇಲ್ಲಿನ ಮಾರಕ್ಕಿರೋ ಮನೆಯಲ್ಲಿ ಚಿತ್ರ ವಿಚಿತ್ರವಾದ ಭೂತ ಬಾಧೆ. ಅದು ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಪಾತ್ರಗಳ ಮೂಲಕ ಕಳೆಗಟ್ಟಿಕೊಳ್ಳಲಿದೆ. ಇದರಲ್ಲಿ ಈ ನಾಲಕ್ಕು ಮಂಸಿ ಕಾಮಿಡಿ ಕಲಾವಿದರೂ ಕೂಡಾ ವಿಶಿಷ್ಟವಾದ ಪಾತ್ರಗಳನ್ನೇ ನಿರ್ವಹಿಸಿದ್ದಾರೆ. ಶ್ರುತಿ ಹರಿಹರನ್ ಮನೆ ಓನರ್ ಆಗಿ ನಟಿಸಿದರೆ, ಕಾರುಣ್ಯಾ ರಾಮ್ ಮತ್ತೊಂದು ಮಹತ್ವದ ಪಾತ್ರಕ್ಕೆ ಜೀವ ತುಂಬಿದ್ದಾರಂತೆ.
ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.