ಸುಭಾಷಿತ :

Wednesday, January 22 , 2020 12:13 PM

ಮಾರಾಟಕ್ಕಿರೋ ಹಾರರ್ ಮನೆಯಲ್ಲಿ ‘ಕಾಮಿಡಿ ಹಬ್ಬ’!


Tuesday, November 12th, 2019 2:23 pm

ಸಿನಿಮಾಡೆಸ್ಕ್‌; ಸಾಧು ಕೋಕಿಲಾ, ಚಿಕ್ಕಣ್ಣರಂಥಾ ನಟರು ಯಾವುದೇ ಸಿನಿಮಾಗಳಲ್ಲೊಂದು ಪಾತ್ರ ಮಾಡಿದರೂ ಟಲ್ಲಿ ಎಂಜಾಯ್ ಮಾಡಿ ಮನಸಾರೆ ನಕ್ಕು ನಿರಾಳವಾಗುವಂಥಾ ಹಾಸ್ಯವಿರುತ್ತದೆ. ಹಾಗಿರುವಾಗ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡರಂಥಾ ನಟರೆಲ್ಲ ಒಂದೇ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಾರೆಂದರೆ ಅಲ್ಲಿ ಪ್ರತೀ ಸೀನುಗಳಲ್ಲಿಯೂ ನಗೆ ಹಬ್ಬ ಗ್ಯಾರೆಂಟಿ ಎಂದೇ ಅರ್ಥ. ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಸಿನಿಮಾದಲ್ಲಿ ಇಷ್ಟೂ ಮಂದಿ ಜೊತೆಯಾಗಿ ನಟಿಸಿದ್ದಾರೆ. ಆದ್ದರಿಂದಲೇ ಪ್ರೇಕ್ಷಕರ ಪಾಲಿಗೆ ಕಾಮಿಡಿ ಹಬ್ಬದಂತೆ ಈ ಚಿತ್ರ ಮೂಡಿ ಬಂದಿದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಈ ವರೆಗೂ ಶಿಶಿರ, ಶ್ರಾವಣಿ ಸ್ಬ್ರಹ್ಮಣ್ಯ, ಶ್ರೀಕಂಠ ಮತ್ತು ಪಟಾಕಿಯಂಥಾ ಯಶಸ್ವೀ ಚಿತ್ರಗಳನ್ನು ನಿರ್ದೇಶನ ಮಾಡಿರುವ ಮಂಜು ಸ್ವರಾಜ್ ಅವರ ಐದನೇ ಚಿತ್ರ ಮನೆ ಮಾರಾಟಕ್ಕಿದೆ. ಯಾವುದೇ ಯಶಸ್ವೀ ನಿರ್ದೇಶಕನೇ ಆದರೂ ತನ್ನ ಹಿಂದಿಬನ ಸಿನಿಮಾ ನೆರಳು ಮುಂದಿನದ್ದರಲ್ಲಿ ಹುಡುಕಿದರೂ ಸಿಗದಂತೆ ದೃಷ್ಯ ಕಟ್ಟಲು ಹಾತೊರೆಯುತ್ತಾರೆ. ಚಿತ್ರದಿಂದ ಚಿತ್ರಕ್ಕೆ ಬೇರೆ ಬೇರೆ ಜಾನರ್‌ಗಳತ್ತ ಚಿತ್ತ ನೆಡುತ್ತಾರೆ. ಮಂಜು ಸ್ವರಾಜ್ ಸಿನಿಮಾ ಗ್ರಾಫ್‌ನಲ್ಲಿಯೂ ಅಂಥಾದ್ದೊಂದು ತುಡಿತವೇ ಎದ್ದು ಕಾಣುತ್ತದೆ. ಅದರ ಫಲವಾಗಿಯೇ ಮನೆ ಮಾರಾಟಕ್ಕಿದೆ ಚಿತ್ರ ರೂಪುಗೊಂಡು ಈ ವಾರ ಬಿಡುಗಡೆಗೆ ರೆಡಿಯಾಗಿದೆ.

ಯಾರೇ ನಿರ್ದೇಶಕರಾದರೂ ಹೀಗೆ ಏಕಾಏಕಿ ಭಿನ್ನ ಜಾನರ್‌ಗಳತ್ತ ಹೊರಳಿಕೊಂಡಾಗ ಹಲವಾರು ಸವಾಲುಗಳೆದುರಾಗುತ್ತವೆ. ಆದರೆ ಮಂಜು ಸ್ವರಾಜ್‌ರನ್ನು ಅದು ಹೇಳಿಕೊಳ್ಳುವಂತೆ ಬಾಧಿಸಲು ಸಾಧ್ಯವಿಲ್ಲ. ಶ್ರಾವಣಿ ಸುಬ್ರಮಣ್ಯದಂಥಾ ಸಿನಿಮಾಗಳ ನವಿರು ಹಾಸ್ಯದ ರುಚಿ ಕಂಡವರಿಗೆ ಈ ಮಾತಿನ ಅರ್ಥ ಗೊತ್ತಾಗದಿರೋದಿಲ್ಲ. ಆದರೆ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಪ್ರತೀ ಫ್ರೇಮಿನಲ್ಲಿಯೂ ನಗಿಸುವಂಥಾ ಸನ್ನಿವೇಶಗಳಿವೆಯಂತೆ. ಅದು ಕಥೆಯಲ್ಲಿಯೇ ಹಾಸು ಹೊಕ್ಕಾಗಿರೋದರಿಂದ ಈ ವಾರ ಪ್ರೇಕ್ಷಕರ ಪಾಲಿಗೆ ಭರಪೂರ ನಗೆ ಹಬ್ಬ ಗ್ಯಾರೆಂಟಿ!

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions