ಜಲೌನ್ (ಉತ್ತರ ಪ್ರದೇಶ) : ಬಿರಿಯಾನಿ ಬಿಲ್ ವಿವಾದವು ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಚೂರಿ ಇರಿತಕ್ಕೆ ಕಾರಣವಾಗಿದೆ.

ಬಿರಿಯಾನಿ ಬಿಲ್ ಪಾವತಿಯ ವಿಚಾರವಾಗಿ ಗ್ರಾಹಕ ರಾಮ್‌ಜಿ ಹಾಗೂ ಹೋಟೆಲ್‌ ಮಾಲೀಕ ರಾಮ್ ಸಿಂಗ್‌ ನಡುವೆ ಜಗಳವಾಗಿದೆ. ಈ ವೇಳೆ ಮಾಲೀಕ ರಾಮ್‌ಜಿಗೆ ಚಾಕುವಿನಿಂದ ಇರಿದಿದ್ದಾನೆ.

ಏನಿದು ಘಟನೆ?

ರಾಮ್‌ಜಿ ಬಿರಿಯಾನಿ ತಿನ್ನಲು ರಾಮ್ ಸಿಂಗ್‌ ಎಂಬುವರ ಹೋಟೆಲ್‌ಗೆ ಹೋಗಿದ್ದಾರೆ. ಬಿರಿಯಾನಿ ತಿಂದ ನಂತ್ರ, ರಾಮ್ ಸಿಂಗ್ 50 ರೂ. ಪಾವತಿಸುವಂತೆ ಕೇಳಿದ್ದಾರೆ. ಈ ವೇಳೆ, ತಾನು ಈಗಾಗಲೇ ಹಣವನ್ನು ಪಾವತಿಸಿದ್ದೇನೆ ಎಂದು ರಾಮ್‌ಜಿ ಹೇಳಿದ್ದಾನೆ. ಆದ್ರೆ, ನಾನು ಪಾವತಿಯನ್ನು ಸ್ವೀಕರಿಸಿಲ್ಲ ಎಂದು ರಾಮ್ ಸಿಂಗ್‌ ನಿರಾಕರಿಸಿದ್ದಾನೆ. ಇದು ವಾಗ್ವಾದಕ್ಕೆ ಕಾರಣವಾಗಿ, ಜಗಳ ತಾರಕಕ್ಕೇರಿತು. ಈ ವೇಳೆ ಕೋಪಗೊಂಡ ರಾಮ್ ಸಿಂಗ್ ರಾಮ್‌ಜಿ ಮೇಲೆ ಹಲ್ಲೆ ನಡೆಸಿದ್ದು, ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ನಡೆದಾಗ ರಾಮ್ ಸಿಂಗ್ ಕುಡಿದ ಸ್ಥಿತಿಯಲ್ಲಿದ್ದರು ಎಂದು ವರದಿಗಳು ತಿಳಿಸಿವೆ. ರಾಮ್‌ಜಿಯ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಒರೈ ಕೊತ್ವಾಲಿ ಪ್ರಭಾರಿ ಇನ್ಸ್‌ಪೆಕ್ಟರ್ ಶಿವ ಕುಮಾರ್ ರಾಥೋಡ್ ಮಾತನಾಡಿ, ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಾಕುವಿನಿಂದ ಇರಿದ ಆರೋಪಿ ಮತ್ತು ಸಂತ್ರಸ್ತ ಇಬ್ಬರೂ ಜಗಳದ ವೇಳೆ ಕುಡಿದಿದ್ದರು. ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ನಾವು ಆರೋಪಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದಿದ್ದಾರೆ.

BIGG BREAKING NEWS: ದೇಶದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ; ಕಳೆದ 24 ಗಂಟೆಗಳಲ್ಲಿ 15,754 ಹೊಸ ಪ್ರಕರಣ ಪತ್ತೆ| COVID CASE

Video: ವಿಮಾನದೊಳಗೆ ಧಮ್‌ ಹೊಡೆದಾಯ್ತು, ಈಗ ನಡು ರಸ್ತೆಯಲ್ಲೇ ಲಿಕ್ಕರ್ ಸೇವನೆ: Social Media Influencer ʻಬಾಬಿ ಕಟಾರಿಯಾʼ ವಿರುದ್ಧ FIR ದಾಖಲು!

BIGG NEWS : ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಿದ್ದರಾಮಯ್ಯ ಪ್ರವಾಸ : ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ, ಬಿಗಿ ಭದ್ರತೆ

Share.
Exit mobile version