ಬೀಜಿಂಗ್: ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಭೂಕಂಪನದ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ 17 ದಿನಗಗಳ ನಂತ್ರ ಜೀವಂತವಾಗಿ ಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

28 ವರ್ಷದ ಜಲವಿದ್ಯುತ್ ಕೇಂದ್ರದ ಉದ್ಯೋಗಿ ಗ್ಯಾನ್ ಯು ಹಾಗೂ ಆತನ ಸಹೋದ್ಯೋಗಿ ಲುವೊ ಯೋಂಗ್‌ ಸೆಪ್ಟೆಂಬರ್ 5 ರಂದು ಸಿಚುವಾನ್‌ನಲ್ಲಿ 6.8 ತೀವ್ರತೆಯ ಭೂಕಂಪನದ ನಂತರ ನಾಪತ್ತೆಯಾಗಿದ್ದರು. ಈ ವೇಳೆ ಭೂಕಂಪಕ್ಕೆ 93 ಜನ ಬಲಿಯಾಗಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.

ಭೂಕಂಪದ ನಂತರ ಗ್ಯಾನ್ ಮತ್ತು ಲುವೊ 12 ಮೈಲಿಗೂ ಹೆಚ್ಚು ದೂರ ಪರ್ವತದ ಭೂಪ್ರದೇಶದಲ್ಲಿ ನಡೆದುಕೊಂಡು ಹೋಗಿದ್ದಾರೆ. ಆದ್ರೆ, ದೂರದೃಷ್ಟಿಯುಳ್ಳ ಗ್ಯಾನ್ ತನ್ನ ಕನ್ನಡಕವನ್ನು ಕಳೆದುಕೊಂಡ ಕಾರಣ ಪರ್ವತ ಭೂಪ್ರದೇಶದಲ್ಲಿ ಸಂಚರಿಸಲು ಕಷ್ಟಪಡುತ್ತಿದ್ದನು. ಹೀಗಾಗಿ, ಲುವೊ ಸಹಾಯವನ್ನು ಹುಡುಕುತ್ತಾ ಮುಂದೆ ಸಾಗಿದ್ದು, ಬಳಿಕ ರಕ್ಷಕರು ಸೆಪ್ಟೆಂಬರ್ 8 ರಂದು ಲುವೊನನ್ನು ಕಂಡುಕೊಂಡರು. ಆದರೆ ಗ್ಯಾನ್ ತೊರೆದ ಸ್ಥಳಕ್ಕೆ ಅವರು ಹಿಂತಿರುಗಿದಾಗ ಅವನು ಅಲ್ಲಿ ಇರಲಿಲ್ಲ.

ಗ್ಯಾನ್ 17 ದಿನಗಳ ಕಾಲ ಕಾಡಿನಲ್ಲಿ ಸಿಕ್ಕ ಹಣ್ಣುಗಳನ್ನು ತಿಂದು, ನೀರು ಕೂಡಿಯುವ ಮೂಲಕ ಅಗ್ನಿಪರೀಕ್ಷೆಯಿಂದ ಬದುಕಿ ಬಂದಿದ್ದಾರೆ. ಇದೀಗ ಗ್ಯಾನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾನ್‌ಗೆ ಹಲವಾರು ಮೂಳೆ ಮುರಿತವಾಗಿದೆ. ಹೀಗಾಗಿ, ಚಿಕಿತ್ಸೆ ಮುಂದುವರೆಸಲಾಗಿದೆ ಎಮಧು ವೈದ್ಯರು ತಿಳಿಸಿದ್ದಾರೆ.

BIGG NEWS : ‘ಬೆಂಕಿ ಪೊಟ್ಟಣ’ ಬಳಸಿ ಬಾಂಬ್‌ ಬ್ಲಾಸ್ಟ್‌ ನಡೆಸಿದ್ದ ಶಂಕಿತ ಉಗ್ರ : ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

ಅಸ್ಸಾಂನ ಕಾಜಿರಂಗಾ ಪಾರ್ಕ್ ಬಳಿ ʻ ಸೈಕ್ಲಿಸ್ಟ್ ಮೇಲೆ ಚಿರತೆ ದಾಳಿ ʼ : ಮುಂದೆನಾಯ್ತು ಗೊತ್ತಾ? ಅಘಾತಕಾರಿ ವಿಡಿಯೋ ವೈರಲ್ | Watch

BREAKING NEWS : ಧಾರ್ಮಿಕ ಮತಾಂತರ ವಿವಾದ ; ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ | SC issues notice to Centre

Share.
Exit mobile version