ಹಾಸನ್ : ಅತಿ ಹೆಚ್ಚು ಮದ್ಯ ಸೇವಿಸುವ ಭಾಜಿ ಕಟ್ಟಿ ಪ್ರಾಣ ಕಳೆದುಕೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, 90 ಎಂಎಲ್ ನ 10 ಪ್ಯಾಕೆಟ್ ಮಧ್ಯ ಸೇವಿಸಿದ ತಿಮ್ಮೇಗೌಡ (60) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಅತಿ ಹೆಚ್ಚು ಮಧ್ಯ ಸೇವಿಸುವ ಭಾಜಿ ಕಟ್ಟಿದ್ದ ದೇವರಾಜ್ ಹಾಗು ತಿಮ್ಮೇಗೌಡ, 30 ನಿಮಿಷದಲ್ಲಿ 90 ಎಂಎಲ್ ನ 10 ಪ್ಯಾಕೆಟ್ ಮಧ್ಯ ಕುಡಿಯುವ ಚಾಲೆಂಜ್ ನಡೆದಿತ್ತು. ಮಧ್ಯ ಸೇವನೆ ಬಳಿಕ ರಕ್ತ ವಾಂತಿ ಮಾಡಿಕೊಂಡು ತಿಮ್ಮೇಗೌಡ ಅಸ್ವಸ್ಥನಾಗಿದ್ದ. ಅಸ್ವಸ್ಥ ಬಳಿಕ ದೇವರಾಜು ಕಾಣೆಯಾಗಿದ್ದಾನೆ.
ಬಳಿಕ ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆ ತಂದು ಬಿಟ್ಟಿದ್ದರು. ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತಿಮ್ಮೇಗೌಡನ ಕುಟುಂಬಸ್ಥರು ತೆರಳಿದ್ದರು. ದೇವರಾಜು ವಿರುದ್ಧ ತಿಮ್ಮೇಗೌಡ ಪುತ್ರಿಯಿಂದ ದೂರು ದಾಖಲಿಸಲಾಗಿದೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ದೂರು ದಾಖಲಾಗಿದೆ.