ನವದೆಹಲಿ: ನಂದಿಗ್ರಾಮದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಸಚಿವ ಅಖಿಲ್ ಗಿರಿ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೂರಲ್‌ ಆಗುತ್ತಿರುವ ವೀಡಿಯೊದಲ್ಲಿ, ಪಶ್ಚಿಮ ಬಂಗಾಳದ ಸಚಿವರು ರಾಷ್ಟ್ರಪತಿಗಳ ಬಗ್ಗೆ ಮಾತನಾಡುತ್ತ ನಾವು ಭಾರತದ ರಾಷ್ಟ್ರಪತಿಯನ್ನು ಗೌರವಿಸುತ್ತೇವೆ, ಆದರೆ ನಮ್ಮ ಅಧ್ಯಕ್ಷರು ಹೇಗಿದ್ದಾರೆ ಎನ್ನುವುದು ಗೊತ್ತಲ್ಲ..’ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿಯ ಬಂಗಾಳ ಘಟಕವು ಈ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷವನ್ನು “ಬುಡಕಟ್ಟು ವಿರೋಧಿ” ಎಂದು ಕರೆದಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮಹಿಳಾ ಕಲ್ಯಾಣ ಸಚಿವ ಶಶಿ ಪಂಕಾ ಕೂಡ ಹಾಜರಿದ್ದರು ಎಂದು ಕೇಸರಿ ಪಕ್ಷ ಹೇಳಿಕೊಂಡಿದೆ.

Share.
Exit mobile version