ನವದೆಹಲಿ : ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ಹಾಗೂ ಪ್ರಣಯ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದೇ ವೇಳೇ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕಿಡಂಬಿ ಶ್ರೀಕಾಂತ್ ಅವರ ಪ್ರಯಾಣವು ಕ್ವಾರ್ಟರ್ ಫೈನಲ್ ನಲ್ಲಿ ಕೊನೆಗೊಂಡಿದೆ. ಶ್ರೀಕಾಂತ್ ಇಂಡೋನೇಷ್ಯಾದ ಕ್ರಿಶ್ಚಿಯನ್ ಅಡಿನಾಟಾ ವಿರುದ್ಧ 21-16, 16-21, 11-21 ಅಂತರದಲ್ಲಿ ಸೋತರು.
ಇಬ್ಬರೂ ಶಟ್ಲರ್ ಗಳು 3-3ರಲ್ಲಿ ಸಮಬಲ ಸಾಧಿಸಿದರು. ನಂತರ ಅಡಿನಾಟಾ ಸತತ ಏಳು ಅಂಕಗಳನ್ನು ಗೆದ್ದು 10-3 ಮುನ್ನಡೆ ಸಾಧಿಸಿದರು. ನಂತರ ಇಂಡೋನೇಷ್ಯಾದ ಶಟ್ಲರ್ ಸುಲಭವಾಗಿ ಗೆದ್ದು ಶ್ರೀಕಾಂತ್ ಅವರ ಪ್ರಯಾಣವನ್ನು ನಿಲ್ಲಿಸಿದರು.