ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿ

ನವದೆಹಲಿ : ನವೆಂಬರ್ ತಿಂಗಳಲ್ಲಿ ನಡೆಯಲಿರುವ ಭಾರತ-ಅಮೆರಿಕ-ಜಪಾನ್ ನಡುವಿನ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಕೂಡ ಭಾಗಿಯಾಗಲಿದೆ. ಈ ಕುರಿತು ಭಾರತದ ರಕ್ಷಣಾ ಇಲಾಖೆ ಅಧಿಕೃತ ಘೋಷಣೆ ಮಾಡಿದ್ದು, ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾವನ್ನೂ ಪಾಲುದಾರ ರಾಷ್ಟ್ರವನ್ನಾಗಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಮಲಬಾರ್ ನೌಕಾ ಸಮರಾಭ್ಯಾಸ ತ್ರಿರಾಷ್ಟ್ರ ಕೂಟ ಇದೀಗ ಚತುಷ್ಟ ಕೂಟವಾಗಿ ಪರಿವರ್ತನೆಗೊಂಡಿದೆ. ಭಾರತ ಆಯೋಜಿಸುವ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಇದೀಗ ವಿಶ್ವದ ಮೂರು ಶಕ್ತಿಶಾಲಿ ನೌಕಾಸೇನೆಗಳು ಭಾಗವಹಿಸಲಿವೆ. ಮುಂದಿನ ನವೆಂಬರ್‌ನಲ್ಲಿ ಅರೇಬಿಯನ್ … Continue reading ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿ