ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಜಿಮ್‌ ಹೋಗಿ ವರ್ಕೌಟ್‌ ಮಾಡುತ್ತೀರುವಾಗಲೇ ವ್ಯಕ್ತಿಗಳು ಸಾವನ್ನಪದಪಿರುವ ಸುದ್ದಿಗಳನ್ನು ಕೇಳುತ್ತೇವೆ.

ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶ ಕೊರತೆಯಿದ್ರೆ ಮಗುವಿನ ಮೈ ಬಣ್ಣ ಕಪ್ಪಾಗಿರುತ್ತಾ? ಸತ್ಯ ಬಿಚ್ಚಿಟ್ಟ ವೈದ್ಯರು | Pregnancy

 

ವ್ಯಾಯಾಮ ಮಾಡಿದರೆ ಫಿಟ್‌ ಆಗಬೇಕೇ ಹೊರತು, ಹೃದಯಘಾತ ಏಕೆ ಆಗುತ್ತದೆ ಎನ್ನುವುದು ಹಲವರ ಪ್ರಶ್ನೆ ಕಾಡುತ್ತಿದೆ.
ವ್ಯಾಯಮ ಮಾಡಿದರೆ ಹೃದಯ ಸೇರಿದಂತೆ ಇಡೀ ದೇಹಕ್ಕೆ ಒಳ್ಳೆಯದು ಎನ್ನುವುದು ಗೊತ್ತಿರುವ ವಿಚಾರ. ಆದರೆ ಇತ್ತೀಚೆಗೆ ನಡೆದ ಕೆಲವು ದುರ್ಘಟನೆಗಳನ್ನು ನೋಡಿದರೆ ನಿಜಕ್ಕೂ ಈ ವಿಚಾರದಲ್ಲಿ ಅನುಮಾನ ಹೆಚ್ಚಾಗಿ ಕಾಡುತ್ತದೆ.
ತಜ್ಞರು ಹೇಳುವ ಪ್ರಕಾರ ಸಮಸ್ಯೆ ವ್ಯಾಯಾಮದಿಂದ ಅಲ್ಲ, ಬದಲಿಗೆ ನಾವು ವ್ಯಾಯಾಮ ಮಾಡುವಾಗ ಮಾಡುವ ತಪ್ಪುಗಳಿಂದ. ನಾನೂ ವ್ಯಾಯಾಮ ಮಾಡುತ್ತೇನೆ ಎಂದು ತೋರಿಕೆಗೆ ವ್ಯಾಯಾಮ ಮಾಡಿದವರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಕೆಲವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಆದರೆ ಇದ್ದಕ್ಕಿದ್ದಂತೆ ನಿಲ್ಲಿಸುತ್ತಾರೆ. ಮತ್ತೊಂದು ದಿನ ಒಂದೇ ಸಮ ಬಹಳ ಹೊತ್ತು ವ್ಯಾಯಾಮ ಮಾಡುತ್ತಾರೆ. ಆದರೆ ಇಂತಹ ತಪ್ಪುಗಳಿಂದಲೇ ಸಮಸ್ಯೆ ಎದುರಾಗುತ್ತದೆ.

ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶ ಕೊರತೆಯಿದ್ರೆ ಮಗುವಿನ ಮೈ ಬಣ್ಣ ಕಪ್ಪಾಗಿರುತ್ತಾ? ಸತ್ಯ ಬಿಚ್ಚಿಟ್ಟ ವೈದ್ಯರು | Pregnancy

 

ವ್ಯಾಯಾಮ ಮಾಡಿದಾಗ ಬೆವರಿನ ರೂಪದಲ್ಲಿ ದೇಹದ ಕಲ್ಮಷ ಹೊರ ಬರುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ. ಈ ನೀರಿನಿಂದ ಸೋಡಿಯಂ ಮತ್ತು ಪೊಟ್ಯಾಸಿಯಮ್ ದೇಹದಿಂದ ಹೊಗೆ ಬರುತ್ತದೆ. ಇವೆರಡರ ಕೊರತೆಯು ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗುತ್ತದೆ
ಅನಿಯಮಿತ ಆಹಾರ ಪದ್ದತಿ ಮತ್ತು ಜೀವನಶೈಲಿಯು ನಿಮ್ಮ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಬಹುದು. ಮಧುಮೇಹ, ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಈ ಸ್ಥಿತಿಯಲ್ಲಿ ಹೆಚ್ಚು ವ್ಯಾಯಾಮ ಮಾಡುವುದರಿಂದ ಹೃದ್ರೋಗದ ಅಪಾಯ ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ.

ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶ ಕೊರತೆಯಿದ್ರೆ ಮಗುವಿನ ಮೈ ಬಣ್ಣ ಕಪ್ಪಾಗಿರುತ್ತಾ? ಸತ್ಯ ಬಿಚ್ಚಿಟ್ಟ ವೈದ್ಯರು | Pregnancy

 

 

ವ್ಯಾಯಾಮ ಮಾಡುವಾಗ ಹಠಾತ್ ಹೃದಯಾಘಾತ ಸಂಭವಿಸಿದರೂ, ಅದಕ್ಕೂ ಮುನ್ನ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವ್ಯಾಯಾಮ ಮಾಡುವ ಉತ್ಸಾಹದಲ್ಲಿ ಅನೇಕರು ಇದನ್ನು ಗಮನಿಸುವುದಿಲ್ಲ. ನಿಮಗೆ ಭುಜ ನೋವು, ಎದೆನೋವು, ಕುತ್ತಿಗೆ ಅಥವಾ ಬೆನ್ನು ನೋವು ಇದ್ದರೆ ಯಾವುದೇ ಕಾರಣಕ್ಕೂ ವ್ಯಾಯಾಮ ಮುಂದುವರೆಸದೆ, ವೈದ್ಯರನ್ನು ಸಂಪರ್ಕಿಸಿದರೆ ಅಪಾಯ ಕಡಿಮೆ ಮಾಡಬಹುದು.

Share.
Exit mobile version