ಸೌತ್ ಚಿತ್ರರಂಗದ ಬ್ಯೂಟಿ ಸಮಂತಾ ಡಿವೋರ್ಸ್ ಆದ್ಮೇಲೆ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ತಿದ್ದಾರೆ. ಬೋಲ್ಡ್, ಡಿ ಗ್ಲಾಮರ್, ಗ್ಲಾಮರ್ ಹೀಗೆ ವಿಭಿನ್ನ ರೂಪದಲ್ಲಿ ಪ್ರತ್ಯಕ್ಷರಾಗುತ್ತಿರುವ ಸ್ಯಾಮ್ ಈಗ ಬರೀ ದಕ್ಷಿಣ ಭಾರತದ ನಟಿಯಾಗಿ ಉಳಿದಿಲ್ಲ. ಇಂಡಿಯನ್ ಸಿನಿಮಾ ಇಂಡಸ್ಟ್ರೀಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸಮಂತಾ ಯಶೋಧ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ನಾಯಕಿಯಾಗಿ ಹೊರಹೊಮ್ಮಿದ್ದು, ಈಗಾಗ್ಲೇ ಈ ಚಿತ್ರದ ಫಸ್ಟ್ ಲುಕ್ ಗೆ ಚಿತ್ರಪ್ರೇಮಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಈಗ ಸಮಂತಾ ಈ ಸಿನಿಮಾ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವ ನಿರ್ದೇಶಕನ ಜೊತೆ ಸ್ಯಾಮ್ ಪ್ಯಾನ್ ಇಂಡಿಯಾ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾದ ಜೊತೆಗೆ ಮಜಲಿ ಬ್ಯೂಟಿ ಭತ್ತಳಿಕೆಯಲ್ಲಿ ಖುಷಿ ಸಿನಿಮಾ ಕೂಡ ರೆಡಿಯಾಗ್ತಿದ್ದಾರೆ. ಈ ಚಿತ್ರದಲ್ಲಿ ಹ್ಯಾಂಡ್ಸಮ್ ಹಂಕ್ ವಿಜಯ್ ದೇವರಕೊಂಡ ನಟಿಸ್ತಿದ್ದು, ಇದೇ ಡಿಸೆಂಬರ್ 23ಕ್ಕೆ ಚಿತ್ರ ರಿಲೀಸ್ ಆಗಲಿದೆ.