ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕ್ರೂಸರ್ ಪಲ್ಟಿಯಾಗಿ ಕರ್ನಾಟಕದ ಮೂವರು ಮಹಿಳೆಯರು ದುರ್ಮರಣ

ಚಿಕ್ಕೋಡಿ: ಇಂದು ಮಹಾರಾಷ್ಟ್ರ ಬಳಿಯಲ್ಲಿ ಕ್ರೂಸರ್ ವಾಹನವೊಂದು ಪಲ್ಟಿಯಾದ ಪರಿಣಾಮ, ಅದರಲ್ಲಿದ್ದಂತ ಚಿಕ್ಕೋಡಿಯ ಬಳ್ಳಿಗೇರಿಯ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅಲ್ಲದೇ ಇನ್ನೂ ಹಲವರು ಗಾಯಗೊಂಡಿರುವಂತ ಘಟನೆ ನಡೆದಿದೆ. ಮಹಾರಾಷ್ಟ್ರದ ಜತ್ತ ಬಳಿಯಲ್ಲಿ ಕ್ರೂಸರ್ ವಾಹನವೊಂದು ಪಲ್ಟಿಯಾದ ಪರಿಣಾಮ, ಅಥಣಿ ತಾಲೂಕಿನ ಬಳ್ಳಿಗೇರಿಯ ಮೂವರು ಮಹಿಳೆಯರು ದುರ್ಮರಣ ಹೊಂದಿದ್ದಾರೆ. ಚಿಕ್ಕೋಡಿಯಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕಾಗಿ ಕ್ರೂಸರ್ ನಲ್ಲಿ ತೆರಳುತ್ತಿದ್ದಾಗ, ಕ್ರೂಸರ್ ವಾಹನದ ಎಡಬದಿಯ ಟೈಯರ್ ಸ್ಪೋಟಗೊಂಡು ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಮಹಾದೇವಿ ಚೌಗಲಾ, ಗೀತಾ ದೊಡ್ಡಮನಿ, ಕಸ್ತೂರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. … Continue reading ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕ್ರೂಸರ್ ಪಲ್ಟಿಯಾಗಿ ಕರ್ನಾಟಕದ ಮೂವರು ಮಹಿಳೆಯರು ದುರ್ಮರಣ