ಮುಂಬೈ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಹೊರ ನಡೆದಿದ್ದಂತ ಏಕನಾಥ ಶಿಂಧೆ, ಮಹಾರಾಷ್ಟ್ರ ನೂತನ ಸಿಎಂ ಆಗಿ ಬಿಜೆಪಿಯ ಜೊತೆಗೆ ಸೇರಿ ಸರ್ಕಾರ ರಚಿಸಿದ್ದರು. ಅಂತಹ ಅವರು, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲಿದ್ದಾರೆ.

ಇನ್ನೂ ಸಿಎಂ ಏಕನಾಥ ಶಿಂಧೆ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ, ಬಂಡಾಯ ಶಾಸಕ ಭರತ್ ಗೊಂಗಾವಲೆ ಅವರನ್ನು ವಿಧಾನಸಭೆಯ ಮುಖ್ಯ ಸಚೇತಕ ಎಂಬುದಾಗಿ ಮಾನ್ಯ ಮಾಡಲಾಗಿದೆ. ಹೀಗಾಗಿ ಇಂದು ಉದ್ಧವ್ ಠಾಕ್ರೆ ಹಾಗೂ ಶಿಂಧೆ ನಡುವೆ ಹೊಸ ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ.

ಜನೌಷಧಿ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಅಂದಹಾಗೆ ಮಹಾರಾಷ್ಟ್ರ ವಿಧಾನಸಭೆಯ ಬಲಾಬಲ ನೋಡೋದಾದ್ರೇ ಒಟ್ಟು 288 ಸ್ಥಾನಗಳಲ್ಲಿ ಬಹುಮತ ಸಾಭೀತುಪಡಿಸಲು 144 ಶಾಸಕರ ಬೆಂಬಲ ಬೇಕಿದೆ. ಮಹಾ ವಿಕಾಸ ಅಘಾಡಿ ಗುಂಪಿನ ಬಣದಲ್ಲಿ 112 ಶಾಸಕರಿದ್ದರೇ, ಬಿಜೆಪಿ ಹಾಗೂ ಸಿಎಂ ಏಕನಾಥ ಶಿಂಧೆ ಬಣ ಹಾಗೂ ಇತರರನ್ನು ಒಳಗೊಂಡು 164 ಮಂದಿ ಶಾಸಕರಿದ್ದಾರೆ. ಹೀಗಾಗಿ ಬಹುತೇಕ ಸುಲಭವಾಗಿ ಶಿಂಧೆ ಇಂದು ಬಹುಮತ ಸಾಭೀತು ಪಡಿಸಲಿದ್ದಾರೆ ಎನ್ನಲಾಗಿದೆ.

Share.
Exit mobile version