ʼಬೆಟ್ಟʼದಲ್ಲಿ ದರ್ಶನ ನೀಡ್ತಿದ್ದಾನೆ ಮಹಾಮಹಿಮ ತಿರುಪತಿ ʼಶ್ರೀ ವೆಂಕಟೇಶ್ವರ ಸ್ವಾಮಿʼ..! – Kannada News Now


India

ʼಬೆಟ್ಟʼದಲ್ಲಿ ದರ್ಶನ ನೀಡ್ತಿದ್ದಾನೆ ಮಹಾಮಹಿಮ ತಿರುಪತಿ ʼಶ್ರೀ ವೆಂಕಟೇಶ್ವರ ಸ್ವಾಮಿʼ..!

ಹೈದರಾಬಾದ್​: ಕೆಲವೊಮ್ಮೆ ಕೆಲವು ಫೋಟೋಗಳು ಮನಸ್ಸಿಗೆ ಮುಟ್ಟಿ ಬಿಡುತ್ವೆ. ಗಣೇಶ, ಕೃಷ್ಣ, ರಾಮ, ಭಾರತದ ಭೂಪಟ ಸೇರಿ ಹಲವು ಆಕಾರಗಳು ಆಕಾಶದಲ್ಲಿ ಮೂಡಿದಾಗ ನೋಡಿ ಖುಷಿಯಿಂದ ಶೇರ್‌ ಮಾಡಿರ್ತಿವಿ. ಅದ್ರಂತೆ, ಇಲ್ಲೊಂದು ಶ್ರೀಸ್ವಾಮಿಯ ಫೋಟೋ ಸಖತ್‌ ವೈರಲ್‌ ಆಗ್ತಿದೆ. ಪ್ರಕೃತಿ ವಿಸ್ಮಯ ತುಂಬಾನೇ ಸದ್ದು ಮಾಡ್ತಿದೆ.

ತಿರುಪತಿ ವೆಂಕಟೇಶ್ವರ ಭಕ್ತರನ ಭಕ್ತರು ಈ ಫೋಟೋವನ್ನ ಭಕ್ತಯಿಂದ ನಮಿಸಿ, ಖುಷಿಯಿಂದ ಶೇರ್‌ ಮಾಡ್ತಿದ್ದಾರೆ. ಇಷ್ಕಕ್ಕೂ ಪ್ರಕೃತಿ ಸೃಷ್ಟಿಸಿರುವ ವಿಸ್ಮಯವಾದ್ರು ಏನು..? ಶ್ರೀ ಸ್ವಾಮಿಗೂ ಇದಕ್ಕೂ ಏನು ಸಂಬಂಧ..?

ಭಕ್ತರ ಪಾಲಿಗೆ ಆರಾದ್ಯ ದೈವವಾಗಿರುವ ವೆಂಕಟೇಶ್ವರ ನೆಲೆಸಿರುವ ತಿರುಮಲ ಬೆಟ್ಟವು ಥೇಟ್​ ತಿರುಪತಿ ತಿಮ್ಮಪ್ಪನ ಮುಖದ ಮಾದರಿಯಲ್ಲೇ ಇರುವುದು ತುಂಬಾ ಅಚ್ಚರಿಗೊಳಿಸಿದೆ.

ಹೌದು, ವೆಂಕಟೇಶ್ವರ ಸ್ವಾಮಿ ಮಲಗಿರುವ ಭಂಗಿಯಲ್ಲಿರುವ ಒಂದು ಫೋಟೋ ಹಾಗೂ ತಿರುಮಲ ಬೆಟ್ಟದ ಮತ್ತೊಂದು ಫೋಟೋವನ್ನ ಒಟ್ಟಿಗೆ ಸೇರಿಸಿ ಎರಡು ಸಾಮ್ಯತೆಯನ್ನ ಭಕ್ತರೊಬ್ಬರು ಗುರುತಿಸಿದ್ದಾರೆ. ರಘು ಹೆಸರಿನ ಟ್ವಿಟರ್​ ಬಳಕೆದಾರರು ನಿನ್ನೆಯಷ್ಟೇ ಶೇರ್​ ಮಾಡಿಕೊಂಡಿದ್ದು, ಭಗವಾನ್​ ವಿಷ್ಣು, ದೈವ ಸ್ವರೂಪ ತಿರುಮಲ ಬೆಟ್ಟದ ರೂಪದಲ್ಲಿದ್ದಾನೆ. ನಿಜಕ್ಕೂ ಇದನ್ನು ನಂಬಲಾಗುತ್ತಿಲ್ಲ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಈ ಪೋಟೋಗೆ ನೆಟ್ಟಿಗರು ಫೀದಾ ಆಗಿದ್ದು ಸಿಕ್ಕಪಟ್ಟೆ ವೈರಲ್‌ ಆಗ್ತಿದೆ.
error: Content is protected !!