ಇಂಡೋನೇಷ್ಯಾ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರದೇಶದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಜಕಾರ್ತಾದಲ್ಲೂ ಕಂಪನದ ಅನುಭವವಾಗಿದೆ. ಇಂಡೋನೇಷ್ಯಾದಲ್ಲಿ ಭೂಕಂಪವು 118 ಕಿಮೀ (73 ಮೈಲುಗಳು) ಆಳದಲ್ಲಿದೆ ಎಂದು ದೇಶದ ಜಿಯೋಫಿಸಿಕ್ಸ್ ಏಜೆನ್ಸಿ ಬಿಎಂಕೆಜಿ ತಿಳಿಸಿದೆ.

BREAKING NEWS : ಟ್ವಿಟರ್, ಅಮೆಜಾನ್, ಪೇಸ್ ಬುಕ್ ಹಾದಿ ಹಿಡಿದ ಓಯೊ ; ಕಂಪನಿಯಿಂದ 600 ಉದ್ಯೋಗಿಗಳಿಗೆ ಗೇಟ್ ಪಾಸ್ |OYO lays off 600 Employees

ಪಶ್ಚಿಮ ಜಾವಾ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು ಸುನಾಮಿ ಸಾಧ್ಯತೆಯನ್ನು ಹೊಂದಿಲ್ಲ ಎಂದು ಸಂಸ್ಥೆ ಹೇಳಿದೆ.

ಯಾವುದೇ ಹಾನಿ ಅಥವಾ ಸಾವು ನೋವು ಇಲ್ಲಿಯವರೆಗೆ ವರದಿಯಾಗಿಲ್ಲ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಹೇಳಿದ್ದಾರೆ.

ಭೂಕಂಪದ ಕೇಂದ್ರದಿಂದ ಸುಮಾರು 50 ಕಿಮೀ (30 ಮೈಲುಗಳು) ದೂರದಲ್ಲಿರುವ ಗರುತ್‌ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಪಶ್ಚಿಮ ಜಾವಾದ ಸಿಯಾಂಜೂರ್‌ನಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪರಿಣಾಮ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

BREAKING NEWS : ದೆಹಲಿ ಗಲಭೆ ಪ್ರಕರಣ : ಉಮರ್ ಖಾಲಿದ್ ನನ್ನು ಖುಲಾಸೆಗೊಳಿಸಿದ ಕರ್ಕರ್ಡೂಮಾ ಕೋರ್ಟ್ | Delhi Riots Case

Share.
Exit mobile version