ಶಿವಮೊಗ್ಗ: ಸೊರಬ ಕ್ಷೇತ್ರದಲ್ಲಿ ಸಹೋದರರ ನಡುವಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯಲ್ಲಿ ಕಾಂಗ್ರೆಸ್ ನಿಂದ ಮಧು ಬಂಗಾರಪ್ಪ ಭರ್ಜರಿಯಾಗಿ ಗೆಲುವು ಸಾಧಿಸಿದ್ದರು. ಇಂತಹ ಅವರಿಗೆ ಇದೀಗ ಸಚಿವ ಸ್ಥಾನ ಒಲಿದಿದೆ. ನಾಳೆ ಅವರು ಅಧಿಕೃತವಾಗಿ ಸಂಪುಟದ ದರ್ಜೆಯ ಸಚಿವರಾಗಿ ರಾಜಭವನದಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ತೊರೆದು ಮಧು ಬಂಗಾರಪ್ಪ ( Madhu Bangarappa ) ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದರು. ಬಿಜೆಪಿಯ ಕುಮಾರ್ ಬಂಗಾರಪ್ಪ ನಡುವಿನ ತೀವ್ರ ಹಣಾಹಣಿಯಲ್ಲಿ ಬರೋಬ್ಬರಿ 90 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿ, ಶಾಸಕರಾಗಿಯೂ ಪ್ರಮಾಣವಚನವನ್ನು ಸ್ವೀಕರಿಸಿದ್ದರು.
ಇದೀಗ ಸೊರಬ ತಾಲೂಕಿನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಂತ ಮಧು ಬಂಗಾರಪ್ಪ ಅವರಿಗೂ ಸಿಎಂ ಸಿದ್ಧರಾಮಯ್ಯ ಸಂಪುಟದಲ್ಲಿ ಜನಸೇವೆಯನ್ನು ಮಾಡುವ ಭಾಗ್ಯ ದೊರೆತಿದೆ. ಇಂದು ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವಂತ ಅಧಿಕೃತ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ. ಈ ಮೂಲಕ ನೂತನ ಸಚಿವರಾಗಿ ನಾಳೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸಚಿವರಾಗಿ ಜನಸೇವೆಗೆ ತೆರೆದುಕೊಳ್ಳಲಿದ್ದಾರೆ.
ಅಂದಹಾಗೇ ನಾಳೆ ಬೆಳಿಗ್ಗೆ 11.45ಕ್ಕೆ ಬೆಂಗಳೂರಿನ ರಾಜಭವನದಲ್ಲಿ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಂತ ಸಮಾರಂಭ ನಡೆಯಲಿದೆ. ಈಗಾಗಲೇ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಶಾಸಕ ಮಧು ಬಂಗಾರಪ್ಪ ( MLA Madhu Bangarappa ) ಅವರಿಗೆ ಕರೆ ಮಾಡಿ, ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
BIG UPDATE: ನಾಳೆ ಸಚಿವರಾಗಿ ’24 ಶಾಸಕ’ರು ಪ್ರಮಾಣವಚನ ಸ್ವೀಕಾರ: ಇಲ್ಲಿದೆ ‘ನೂತನ ಸಚಿವರ’ ಅಧಿಕೃತ ಪಟ್ಟಿ