ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟದ ಸಚಿವರಿಗೆ ಸಚಿವಸ್ಥಾನದ ಹಂಚಿಕೆಯನ್ನೇ ಮಾಡಿಲ್ಲ. ಅದಕ್ಕೂ ಮುನ್ನಾ ನಾಳೆ ರಾಜಭವನದಲ್ಲಿ ಮತ್ತೆ 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಪಟ್ಟಿಯಲ್ಲಿ ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಅವರ ಹೆಸರು ಕೂಡ ಇದ್ದು, ನಾಳೆ ರಾಜಭವನದಲ್ಲಿ ನಡೆಯುವಂತ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಾಳೆ ರಾಜಭವನದಲ್ಲಿ ಸಚಿವರಾಗಿ ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎಂ.ಸಿ ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಶರಣಪ್ರಕಾಶ್ ಪಾಟೀಲ್, ಹೆಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ರಹೀಂ ಖಾನ್, ಬ. ನಾಗೇಂದ್ರ, ಮಂಕಾಳು ವೈದ್ಯ, ಮಧುಬಂಗಾರಪ್ಪ, ಬೋಸರಾಜು, ಕೆ ಎನ್ ರಾಜಣ್ಣ, ಶಿವಾನಂದ ಪಾಟೀಲ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪರಿಯಾಪಟ್ಟಣ ವೆಂಕಟೇಶ್, ಎಸ್ ಎಸ್ ಮಲ್ಲಿಕಾರ್ಜುನ, ಸಿ.ಪುಟ್ಟರಂಗಶೆಟ್ಟಿ, ಎಸ್ ಎಸ್ ಮಲ್ಲಿಕಾರ್ಜು, ಸಿ ಪುಟ್ಟರಂಶೆಟ್ಟಿ, ಚಲವುರಾಯಸ್ವಾಮಿ, ಶಿವರಾಜ ತಂಡರಗಿ, ಆರ್ ಬಿ ತಿಮ್ಮಾಪುರ, ರುದ್ರಪ್ಪ ಲಮಾಣಿ ಹಾಗೂ ಡಾ.ಹೆಚ್ ಸಿ ಮಹದೇವಪ್ಪ ಸೇರಿ 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಂದಹಾಗೇ ಇಂದು ದೆಹಲಿಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಬೇಟಿಯಾಗಿ, ಸಚಿವ ಸ್ಥಾನ ಹಂಚಿಕೆ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದರು. ಈ ಚರ್ಚೆಯ ನಂತ್ರ ಹೈಕಮಾಂಡ್ ಸಚಿವ ಸ್ಥಾನ ಹಂಚಿಕೆ, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲೇ ನಾಳೆ 23 ಮಂದಿ ಶಾಸಕರು ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BIG NEWS: JDS ರಾಜ್ಯಾಧ್ಯಕ್ಷರಾಗಿ ಸಿ.ಎಂ ಇಬ್ರಾಹಿಂ, ಯುವ ಜನತಾದಳ ಅಧ್ಯಕ್ಷರಾಗಿ ನಿಖಿಲ್ ಮುಂದುವರಿಕೆ – HDK