ಸುಭಾಷಿತ :

Thursday, April 2 , 2020 2:50 PM

ಪ್ರೀತಿ-ಪ್ರೇಮದ ಗುಂಗಲ್ಲಿ ‘ಡಾರ್ಲಿಂಗ್ ಕೃಷ್ಣ ’ : ಜ.31 ಕ್ಕೆ ‘ಲವ್ ಮಾಕ್ಟೈಲ್’ ಗ್ರ್ಯಾಂಡ್ ರಿಲೀಸ್..!


Wednesday, January 29th, 2020 8:21 pm

ಸಿನಿಮಾ ಡೆಸ್ಕ್ :  ಸ್ಯಾಂಡಲ್ ವುಡ್ ನ ಡಾರ್ಲಿಂಗ್ ಕೃಷ್ಣ ಲವ್ ಮಾಡೋದ್ರಲ್ಲಿ ಫುಲ್ ಬಿಜಿಯಾಗಿಬಿಟ್ಟಿದಾರೆ. ಅಂದ್ರೆ ರಿಯಲ್ ಆಗಿ ಅಲ್ಲ,ನಾವ್ ಹೇಳ್ತಿರೋದು ಡಾರ್ಲಿಂಗ್ ಕೃಷ್ಣರ ಲವ್ ಮಾಕ್ಟೈಲ್ ರೀಲ್ ಕಥೆ ಬಗ್ಗೆ. ಹೈಸ್ಕೂಲಿನಿಂದಲೇ ಹೃದಯದಲ್ಲಿ ಮೊಳಕೆಯೊಡೆದಿರೋ ಪ್ಯೂರ್ ಪ್ರೀತಿಗೆ  ನಮ್ಮ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಭರ್ಜರಿಯಾಗೇ ಸಾಥ್ ನೀಡಿದ್ದಾರೆ. ಯುವಮನಸ್ಸುಗಳಿಗೆ ಪ್ರೀತಿಯ ಕಿಚ್ಚು ಹತ್ತಿಸೋ ಈ ಲವ್ ಮಾಕ್ಟೈಲ್ ಸಿನಿಮಾ ದಿನೇದಿನೇ ಇಂಡಸ್ಟ್ರಿಯಲ್ಲಿ ತನ್ನ ಖದರ್ ಏನು ಅಂತ ನಿಧಾನವಾಗಿ ಪ್ರೂವ್ ಮಾಡ್ತಿದೆ.

ಹೌದು,  ಲವ್ಮಾಕ್ಟೈಲ್. ಒಂದು ನಯಾ ಪ್ರೇಮಭಾಷ್ಯಾ ಬರೆಯೋ ಹುಮ್ಮಸ್ಸಿನಲ್ಲಿರೋ ಸಿನಿಮಾ. ತನ್ನ ಟ್ರೈಲರ್ ಹಾಗೂ ಲವ್ ಯೂ ಚಿನ್ನಾ ಎನ್ನುವ ಮೆಲೊಡಿಯಸ್ ಹಾಡಿನಿಂದ ಪ್ರೇಕ್ಷಕರ ಮನಸೂರೆಗೊಂಡಿರೋ ಈ ಲವ್ಮಾಕ್ಟೈಲ್ ಚಿತ್ರ ಆಲ್ರೆಡಿ ಗಾಂಧಿನಗರದ ಮಂದಿಯ ನಿದ್ರೆ ಕದ್ದುಬಿಟ್ಟಿದೆ. ಲವ್ಮಾಕ್ಟೈಲ್ ಟ್ರೈಲರ್ಗೆ ದನಿ ನೀಡಿದ್ದ ಕಿಚ್ಚ ಹಾಡುಗಳನ್ನೂ ರಿಲೀಸ್ ಮಾಡಿ,ಈಗಾಗಲೇ ಚಿತ್ರದ ಹಾಡುಗಳಿಗೆ ಸಿನಿಪ್ರಿರು ಫಿದಾ ಆಗಿದ್ದಾಗಿದೆ.

ಇಷ್ಟುದಿನಗಳ ಕಾಲ ಸ್ಯಾಂಡಲ್ವುಡ್ನಲ್ಲಿ ಹೀರೊ ಆಗಿ ಮಿಂಚಿದ್ದ ಡಾರ್ಲಿಂಗ್ ಕೃಷ್ಣಗೆ ಈ ಲವ್ಮಾಕ್ಟೈಲ್ ತುಂಬಾನೇ ಸ್ಪೆಷಲ್. ಯಾಕಂದ್ರೆ ನಟನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳೊದರ ಜೊತೆಗೆ ನಿರ್ಮಾಪಕನಾಗಿಯೂ ಮಿಂಚಲಿದ್ದಾರೆ. ಊಟಕ್ಕೆ ಉಪ್ಪಿನಕಾಯಿ ಎನ್ನುವಂತೆ ನಿರ್ದೆಶಕನ ಕ್ಯಾಪ್ ಕೂಡ ಧರಿಸಿ ಕೃಷ್ಣ ಹೊಸ ಕಮಾಲ್ ತೋರಿಸಲಿದ್ದಾರೆ. ಮಾಡಿದ್ರೆ ಒಂದು ಗಟ್ಟಿ ಸಬ್ಜೆಕ್ಟ್ ಇರೋ ಸಿನಿಮಾನೇ ಮಾಡಬೇಕು ಎನ್ನುವ ಹಠದೊಂದಿಗೆ ಡಾರ್ಲಿಂಗ್ ಕೃಷ್ಣ ಮತ್ತೆ ಪ್ರೇಕ್ಷಕನ ಮುಂದೆ ಬರ್ತಿದಾರೆ.

ಇನ್ನು ನಾಯಕಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ಮಾಣದಲ್ಲೂ ಕೈಜೋಡಿಸಿರುವ ಮಿಲನ ನಾಗರಾಜ್ ಸಿನಿಮಾದ ಬಗ್ಗೆ ಫುಲ್ ಕಾನ್ಫಿಡೆನ್ಸ್ನಲ್ಲಿದ್ದಾರೆ. ಇನ್ನು ಸ್ಯಾಂಡಲ್ವುಡ್ನಲ್ಲಿ ತಮ್ಮ ಯೂನಿಕ್ ಮ್ಯೂಸಿಕ್ ಕಂಪೋಸಿಂಗ್ ಮೂಲಕ ಕೇಳುಗರ ಮನಸ್ಸುಗಳನ್ನ ಕದ್ದಿರೋ ರಘು ದೀಕ್ಷಿತ್ ಈ ಲವ್ಮಾಕ್ಟೈಲ್ಗೆ ಸಂಗೀತ ಸಂಯೋಜಿಸಿದ್ದಾರೆ.

ಅಂತೂ ಇದೇ ಜ.31ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿರೋ ಲವ್ಮಾಕ್ಟೈಲ್ ಪ್ರೇಕ್ಷಕರಲ್ಲಿ ತನ್ನ ಜಾಗವನ್ನ ಕಲ್ಪಿಸಿಕೊಳ್ಳೊದ್ರಲ್ಲಿ ಯಶಸ್ವಿಯಾಗ್ತಿದೆ. ಇನ್ನು ಥಿಯೇಟರ್ ನಲ್ಲಿ ಯಾವೆಲ್ಲ ಮ್ಯಾಜಿಕ್ ಮಾಡುತ್ತೆ ಎನ್ನುವುದೇ ಸದ್ಯದ ಸಸ್ಪೆನ್ಸ್.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions