ಧಾರವಾಡ: ನೇಹಾ- ಫಯಾಜ್ ಇಬ್ಬರು ಪ್ರೀತಿಸುತ್ತಿದ್ದರು, ಕೆಲ ದಿನಗಳಿಂದ ನೇಹಾ ಫಯಾಜ್‌ ಅನ್ನು ಅವೈಡ್‌ ಮಾಡುತ್ತಿದ್ದಳು ಈ ಹಿನ್ನಲೆಯಲ್ಲಿ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಫಯಾಜ್‌ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ‌ಸುಕುಮಾರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ನೇಹಾ, ಫಯಾಜ್​​ನನ್ನು ಅವೈಡ್ ಮಾಡುತ್ತಿದ್ದಳು. ಇದೇ ಕೊಲೆಗೆ ಕಾರಣ ಎಂದು ಆರೋಪಿ‌ ಹೇಳಿದ್ದಾನೆ  ಇದಲ್ಲದೇ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ನಡೆಸಲಾಗುವುದು, ಇದಲ್ಲೇ ಆತನ ಹೇಳಿಕೆಯ ಸತ್ಯ ಸತ್ಯ ತಿಳಿದುಕೊಂಡು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ, ತನಿಖೆ ಬಳಿಕ ಎಲ್ಲವೂ ತಿಳಿದು ಬರಲಿದೆ ಅಂತ ತಿಳಿಸಿದ್ದಾರೆ. ಈ ನಡುವೆ ಆರೋಪಿ ಫಯಾಜ್‌ ನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನೇಹಾ ಹಿರೇಮಠ, ಹತ್ಯೆಯಾದ ಯುವತಿ. ಫಯಾಜ್ ಹತ್ಯೆ ಮಾಡಿದ ಆರೋಪಿ. ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ. ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ.

Share.
Exit mobile version