ಸುಭಾಷಿತ :

Tuesday, January 28 , 2020 2:09 PM

‘ಸೋಪಿ’ನ ಮುಂದೆ ಮರೆಯಾಯ್ತು ‘ಮಾನವೀಯತೆ’ : ಸಾವು ಬದುಕಿನ ಹೋರಾಟದ ಜನ್ರನ್ನು ಕಾಪಾಡದೇ ‘ಸಾಬೂನು ಕದ್ದೊಯ್ದ’ ಜನರು


Sunday, November 3rd, 2019 8:27 pm

ತುಮಕೂರು : ಎಷ್ಟೇ ಬಾರಿ ಜನರಿಗೆ ಮಾನವೀಯತೆಯಿಂದ ನಡೆದುಕೊಳ್ಳುವಂತೆ ಅನೇಕ ಘಟನೆಗಳ ಮೂಲಕ ಉದಾಹರಣೆ ಸಹಿತ ತಿಳಿಸಿದ್ರೂ, ಡೋಂಟ್ ಕೇರ್. ಇದಕ್ಕೆ ಸಾಕ್ಷಿ ಎಂಬಂತೆ ಲಕ್ಸ್ ಸಾಬೂನು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಉರುಳಿಬಿದ್ದಿದ್ದರಿಂದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಇನ್ನೂ ಅನೇಕರು ಬಸ್ ನಲ್ಲಿ ಸಿಲುಕಿ ಒದ್ದಾಡುತ್ತಿದ್ದರು. ಇನ್ನೂ ಇದ್ಯಾವುದನ್ನು ಗಮನಿಸಿದೇ ಮಾನವೀಯತೆ ಮರೆದ ಜನರು ಲಕ್ಸ್ ಸೋಪನ್ನು ಕದ್ದೊಯ್ಯುವ ಕಾಯದಕದಲ್ಲಿ ತೊಡಗಿದ್ದರು.

ಹೌದು ಇಂತಹ ಘಟನೆಯೊಂದು ತುಮಕೂರಿನ ಸಮೀಪದ ಊರುಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಖಾಸಗಿ ಬಸ್ ಒಂದು ಲಕ್ಸ್ ಸಾಬೂನು ತುಂಬಿದ ಲಾರಿಯನ್ನು ಹಿಂದೆ ಹಾಕಿ ತೆರಳುವ ಬರದಲ್ಲಿ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹೀಗಾಗಿ ಲಾರಿ ಉರುಳಿ ಬಿದ್ದು, ಬಸ್ ಹಾಗೂ ಲಾರಿಯಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇನ್ನೂ ಬಸ್ ನ ಡೋಲ್ ನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹೊರತೆಗೆಯುವ ಸಾಹಸದಲ್ಲಿ ತೊಡಗಲಿದ್ದರೇ, ಲಕ್ಸ್ ಸಾಬೂನು ತುಂಬಿದ್ದ ಲಾರಿ ಉರುಳಿ ಬಿದ್ದು, ಲಕ್ಸ್ ಸಾಬೂನು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಇದನ್ನು ಕಂಡಿದ್ದೇ ತಡ ಮಾನವೀಯತೆ ಮರೆತ ಜನರು, ಸಾವು ಬದುಕಿನ ನಡುವೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಇಳಿಯದೇ, ಸಾಬೂನಿನ ಮುಂದೆ ಮಾವನೀಯತೆಯನ್ನು ಮರೆತು ಬಿಟ್ಟಿದ್ದಕ್ಕೂ ಸಾಕ್ಷಿಯಾಯಿತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions