ಚಿಕ್ಕಮಗಳೂರು : ಅಕ್ರಮ ಆಸ್ತಿ, ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಗೆ ದೂರು ನೀಡಲಾಗಿದೆ.

ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅವರು ಸರ್ಕಾರಕ್ಕೆ 75 ಕೋಟಿ ರೂ ತೆರಿಗೆ ವಂಚನೆ ಎಸಗಿದ್ದಾರೆ. 200 ಕೋಟಿ ಅಕ್ರಮ ಆಸ್ತಿ ಖರೀದಿ ಮಾಡಿದ್ದಾರೆ. ಅಕ್ರಮವಾದ ಭೂಮಿಯಲ್ಲಿ ಕಾಫಿ ಕ್ಯೂರಿಂಗ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸಿ.ಪಿ ವಿಜಯಾನಂದ ಎಂಬುವವರು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ದೂರು ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿತ್ತು.ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ಗಾಯತ್ರಿ ಶಾಂತೇಗೌಡ ಅವರ ಮನೆಗೆ 10ಕ್ಕೂ ಹೆಚ್ಚು ವಾಹನಗಳಲ್ಲಿ ಐಟಿ ಅಧಿಕಾರಿಗಳು ನಡೆಸಿದ್ದಾರೆ. ಗಾಯತ್ರಿ ಅವರ ಪತಿ ಶಾಂತೇಗೌಡರು ಗುತ್ತಿಗೆದಾರರು. ಕಳಸಾಪುರ ರಸ್ತೆಯಲ್ಲಿರುವ ಅವರ ಮಾಲೀಕತ್ವದ ಕ್ರಷರ್ ಮೇಲೆಯೂ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ದಾಳಿಯ ವೇಳೆ ಗಾಯತ್ರಿ ಶಾಂತೇಗೌಡರಿಗೆ ಸಂಬಂಧಿಸಿದ ಆಸ್ತಿ ವಿವರಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದರು.

BIGG NEWS : 1 ವರ್ಷದ ಪುಟ್ಟ ಕಂದಮ್ಮನ ಮೇಲೆ ‘ಸಲಿಂಗ ದೌರ್ಜನ್ಯ’ ನಡೆಸಿ ಕೊಂದ ಕಿರಾತಕ : ಆರೋಪಿಗೆ ಮರಣದಂಡನೆ ವಿಧಿಸಿ ಕೋರ್ಟ್ ಆದೇಶ

BIGG NEWS: ಬಿಜೆಪಿ ಇತಿಹಾಸದಲ್ಲೇ ರಾಜಕೀಯ ಹುನ್ನಾರ ಮಾಡಿಲ್ಲ; ಕಾಂಗ್ರೆಸ್‌ ಗೆ ಸುಧಾಕರ್‌ ತಿರುಗೇಟು

Share.
Exit mobile version