BREAKING: ಮಂಡ್ಯ ಲೋಕೋಪಯೋಗಿ ಕಛೇರಿ ಮೇಲೆ ಲೋಕಾಯುಕ್ತ ದಾಳಿ: ಕಡತಗಳ ಪರಿಶೀಲನೆ

ಮಂಡ್ಯ : ಕಾಮಗಾರಿ ಮಾಡಿರುವ ಬಿಲ್ ಬಿಡುಗಡೆ ಮಾಡಲು ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಡ್ಯ ನಗರದ ಲೋಕೋಪಯೋಗಿ ಇಲಾಖೆ ಕಚೇರಿಗೆ ಸೋಮವಾರ ದಾಳಿ ನಡೆಸಿ ಸತತ ನಾಲ್ಕೂವರೆ ಗಂಟೆಗಳ ಕಾಲ ಕಡತಗಳ ಪರಿಶೀಲನೆ ನಡೆಸಿದ್ದಾರೆ. 2021ರಲ್ಲಿ ಮಾಡಿರುವ ಕಾಮಗಾರಿಗೆ ಬಿಲ್ ಬಿಡುಗಡೆ ಮಾಡಿಲ್ಲ. ಬದಲಿಗೆ 2024ರಲ್ಲಿ ಮಾಡಿರುವ ಕಾಮಗಾರಿಯ ಹಣವನ್ನು ಬಿಡುಗಡೆ ಮಾಡುವ ಸೀನಿಯಾರಿಟಿ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಹಲವು ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ … Continue reading BREAKING: ಮಂಡ್ಯ ಲೋಕೋಪಯೋಗಿ ಕಛೇರಿ ಮೇಲೆ ಲೋಕಾಯುಕ್ತ ದಾಳಿ: ಕಡತಗಳ ಪರಿಶೀಲನೆ