ಪೆಗಾಗಸ್ ಕುರಿತು ಪ್ರತಿಪಕ್ಷಗಳಿಂದ ಗದ್ದಲ: ಮಧ್ಯಾಹ್ನ 2ರವರೆಗೆ ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಲೋಕಸಭೆಯಲ್ಲಿ ಇಂದು ಪೆಗಾಸಸ್‌ ಗೂಢಚರ್ಯೆ ಪ್ರಕರಣ ಚರ್ಚೆ ಮಂಗಳವಾರವೂ ಮುಂದುವರೆದಿದ್ದು, ವಿರೋಧ ಪಕ್ಷಗಳ ಸದಸ್ಯರ ಗದ್ದಲದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2ರ ವರೆಗೆ ಮುಂದೂಡಲಾಯಿತು. ಬೆಳಿಗ್ಗೆ ಕಲಾಪ ಆರಂಭಗೊಳ್ಳುತ್ತಿರುವಂತೆಯೇ ಪೆಗಾಸಸ್‌ ಪ್ರಕರಣ ಹಾಗೂ ಇತರ ವಿಷಯಗಳನ್ನು ಪ್ರಸ್ತಾಪಿಸಿದ ವಿರೋಧ ಪಕ್ಷಗಳ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೀಗಾಗಿ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿದರು. ನಿನ್ನೆ ಕೂಡ ಪ್ರತಿಪಕ್ಷಗಳು ಗಲಭೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಮುಂದೂಡಲಾಗಿತ್ತು.