ಬೆಂಗಳೂರು: ಏಪ್ರಿಲ್.26ರಂದು ಮೊದಲ ಹಂತದ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಮತದಾರರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ನಮ್ಮ ಮೆಟ್ರೋ ರಾತ್ರಿ 11.55ರವರಗೆ ಸಂಚಾರವನ್ನು ವಿಸ್ತರಿಸಿದೆ.

ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 26.04.2024 ರಂದು ಬೆಂಗಳೂರಿನಲ್ಲಿ ನಡೆಯುವ ಲೋಕಸಭಾ ಚುನಾವಣೆ 2024ರ ಪ್ರಯುಕ್ತ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ ಚಲ್ಲಘಟ್ಟ, ವೈಟ್ ಫೀಲ್ (ಕಾಡುಗೋಡಿ) ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 3.55 ಕ್ಕೆ (11.55pm) ವಿಸ್ತರಿಸಲಾಗಿದೆ ಎಂದಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ದಿನಾಂಕ 27.04.2024 ರಂದು 00.35 ಗಂಟೆಗೆ (ಮಧ್ಯರಾತ್ರಿ 00.35) ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೋರಿದೆ.

ಸಾರ್ವಜನಿಕರೇ ಎಚ್ಚರ : ವಾಟ್ಸಪ್ ನಿಂದ ‘ಸ್ಟಾಕ್ ಮಾರ್ಕೆಟ್’ ಆಪ್ ಡೌನ್ಲೋಡ್ ಮಾಡಿಕೊಂಡು 5.2 ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ!

WhatsApp Updates:ಶೀಘ್ರದಲ್ಲೇ ವಾಟ್ಸಪ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಉಳಿಸದೆ ಕರೆ ಮಾಡುವ ಸೌಲಭ್ಯ

Share.
Exit mobile version