ಬೆಂಗಳೂರು: ಇಂದು ರಾಜ್ಯದ 14 ಜಿಲ್ಲೆಗಳಲ್ಲಿ ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚುನಾವಣಾ ಆಯೋಗದ ಮಾಹಿತಿಯಂತೆ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಜೆ.5 ಗಂಟೆಯವರೆಗೆ ಶೇ.66.05ರಷ್ಟು ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಸಂಜೆ ಐದು ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಶೇ.66.05ರಷ್ಟು ಮತದಾನ ನಡೆದಿದೆ ಎಂಬುದಾಗಿ ತಿಳಿಸಿದೆ.

ಹೀಗಿದೆ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶೇಕಡವಾರು ಮತದಾನ

  1. ರಾಯಚೂರು ಶೇ.59.48
  2. ಬೀದರ್ ಶೇ.60.17
  3. ಕಲಬುರ್ಗಿ ಶೇ.57.20
  4. ಚಿಕ್ಕೋಡಿ ಶೇ.72.75
  5. ಕೊಪ್ಪಳ 66.05
  6. ಬಳ್ಳಾರಿ ಶೇ.68.94
  7. ವಿಜಯಪುರ ಶೇ.60.95
  8. ಹಾವೇರಿ ಶೇ.71.90
  9. ಬಾಗಲಕೋಟೆ ಶೇ.65.55
  10. ಉತ್ತರ ಕನ್ನಡ ಶೇ.69.
  11. ದಾವಣಗೆರೆ ಶೇ.70.90
  12. ಶಿವಮೊಗ್ಗ ಶೇ.72.07
  13. ಧಾರವಾಡ ಶೇ.67.15
  14. ಬೆಳಗಾವಿ ಶೇ.65.67

ಪ್ರಜ್ವಲ್ ‘ಪೆನ್ ಡ್ರೈವ್’ ಕೇಸಲ್ಲಿ ಹಾಸನ ಮಾಜಿ ಶಾಸಕನ ಕೈವಾಡವಿದೆ : ಶಾಸಕ ರವಿಗಣಿಗ ಗಂಭೀರ ಆರೋಪ

ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್

Share.
Exit mobile version