ಮೈಸೂರು: ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ (Mysore Lok Sabha constituency) ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ವೃದ್ಧೆಯೊಬ್ಬರು ಮತದಾನ ಮಾಡಿದ ಬಳಿಕ ವಿಧಿವಶರಾದ ಘಟನೆ ನಡೆದಿದೆ.

ಇಲ್ಲಿನ ತಿಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 172ರಲ್ಲಿ ಮತ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಹೊರ ಬರುತ್ತಿದ್ದಂತೆ ಅವರು ಕುಸಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ಪುಟ್ಟಮ್ಮ (90) ಮೃತ ವೃದ್ದೆಯಾಗಿದ್ದಾರೆ.

Share.
Exit mobile version