ಬೆಂಗಳೂರು: ನಿನ್ನೆ ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಿತು. ಈ ಸಂದರ್ಭದಲ್ಲಿ ಚುನಾವಣಾ ಅಕ್ರಮ ಸಂಬಂಧ 2000ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದಾವೆ.

ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಲಾಗಿದ್ದು, ನಿನ್ನೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಿತು. ಈ ವೇಳೆಯಲ್ಲಿ ಚುನಾವಣಾ ಅಕ್ರಮ ಸಂಬಂಧ ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ ಹಾಗೂ ಉಚಿತ ಉಡುಗೋರೆಗಳನ್ನು ಜಪ್ತಿ ಮಾಡಲಾಗಿದೆ ಎಂದಿದೆ.

ರಾಜ್ಯದಲ್ಲಿ ನಿನ್ನೆ ಒಂದೇ ದಿನ ಚುನಾವಣಾ ಅಕ್ರಮ ಸಂಬಂಧ 2,172 ಪ್ರಕರಣಗಳು ದಾಖಲಾಗಿದ್ದಾವೆ ಎಂದು ತಿಳಿಸಿದೆ.

ಇನ್ನೂ ಲೈಸೆನ್ಸ್ ಉಲ್ಲಂಘನೆ ಮಾಡಿದ್ದಕ್ಕಾಗಿ 4,789 ಪ್ರಕರಣ ದಾಖಲಾಗಿದ್ದಾವೆ. ಎನ್ ಡಿ ಪಿಎಸ್ ಕಾಯ್ದೆ ಅಡಿಯಲ್ಲಿ 177, ಸೆಕ್ಷನ್ 15ರಡಿ 28,299 ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಒಟ್ಟು 1,916 ವಾಹನಗಳನ್ನು ಚುನಾವಣಾ ಅಕ್ರಮ ಸಂಬಂಧ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

BREAKING : ಕೆಂಪು ಸಮುದ್ರದಲ್ಲಿ ಯೆಮೆನ್ ಹೌತಿಗಳಿಂದ ‘ಆಂಡ್ರೊಮಿಡಾ ಸ್ಟಾರ್ ತೈಲ ಟ್ಯಾಂಕರ್’ ಮೇಲೆ ಕ್ಷಿಪಣಿ ದಾಳಿ!

ಇನ್ಮುಂದೆ ವರ್ಷಕ್ಕೆ ಎರಡು ಬಾರಿ ‘CBSE’ ಬೋರ್ಡ್ ಪರೀಕ್ಷೆ : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

Share.
Exit mobile version