ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ ಜಿಲ್ಲೆಯ ‘ಬಾಂಜಾರುಮಲೆ’ಯಲ್ಲಿ ಶೇ.100ರಷ್ಟು ಮತದಾನ

ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಯಲ್ಲಿ ಶೇ.100ರಷ್ಟು ಮತದಾನ ಆಗಿದ್ದು, ಅಧಿಕಾರಿಗಳು ಗ್ರಾಮಸ್ಥರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಹೌದು. ನಿನ್ನೆ ನಡೆದಂತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಮೊದಲ ಬಾರಿಗೆ ನಕ್ಸಲ್ ಪೀಡಿತ ಬಾಂಜಾರುಮಲೆಯಲ್ಲಿ ಶೇ.100 ಮತದಾನವಾಗಿ, ದಾಖಲೆ ನಿರ್ಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಾಂಜಾರುಮಲೆಯ ಮತಗಟ್ಟೆ ಸಂಖ್ಯೆ 86ರ ಸಮುದಾಯ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ. 2019ರಲ್ಲಿ ಇಲ್ಲಿ … Continue reading ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ ಜಿಲ್ಲೆಯ ‘ಬಾಂಜಾರುಮಲೆ’ಯಲ್ಲಿ ಶೇ.100ರಷ್ಟು ಮತದಾನ