‘ಲಾಕ್ ಡೌನ್’ ನಡುವೆ ಹಸೆಮಣೆ ಏರಲಿದ್ದಾರೆ ಟಾಲಿವುಡ್ ನ ಈ ಜನಪ್ರಿಯ ಜೋಡಿ…! – Kannada News Now


Film India Other Film

‘ಲಾಕ್ ಡೌನ್’ ನಡುವೆ ಹಸೆಮಣೆ ಏರಲಿದ್ದಾರೆ ಟಾಲಿವುಡ್ ನ ಈ ಜನಪ್ರಿಯ ಜೋಡಿ…!

ಸಿನಿಮಾ ಡೆಸ್ಕ್ : ದೇಶದಲ್ಲಿ ಕೊರೊನಾ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ, ಇನ್ನೂ ಕೊರೋನಾ ಲಾಕ್ಡೌನ್ನಿಂದಾಗಿ ಸಾಕಷ್ಟು ಶುಭ ಸಮಾರಂಭಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅದ್ಧೂರಿಯಾಗಿ ಮದುವೆ ಯೋಜನೆ ಹಾಕೊಂಡಿದ್ದ ಸೆಲೆಬ್ರಿಟಿಗಳು ಕೂಡ ತಮ್ಮ ಮದುವೆಯವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ

ಇನ್ನು ಕೆಲ ಸೆಲೆಬ್ರಿಟಿಗಳು ಸರಳವಾಗಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕನ್ನಡದ ನಟ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರ ಸ್ವಾಮಿ ಮತ್ತು ರೇವತಿ ಸರಳವಾಗಿ ವಿವಾಹವಾಗಿದ್ದರು. ಇದೀಗ ಟಾಲಿವುಡ್​ ನಟ ನಿಖಿಲ್​ಸಿದ್ಧಾರ್ಥ್​​​​​ ಹಸೆಮಣೆ ಏರಲಿದ್ದಾರೆ. ಗೆಳತಿ ಪಲ್ಲವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಮೇ 14ರಂದು ಈ ಜೋಡಿ ವಿವಾಹವಾಗುತ್ತಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ನಿಖಿಲ್​ ಮತ್ತು ಪಲ್ಲವಿ ವಿವಾಹ ಏ.16ರಂದು ನಡೆಯ ಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ವಿವಾಹ ದಿನಾಂಕ ಮುಂದೂಡಿಕೆ ಆಯಿತು. ಇದೀಗ ನಿಖಿಲ್​ ತಮ್ಮ ಫಾರ್ಮ್​ಹೌಸ್​ನಲ್ಲಿ ಸರಳ ವಿವಾಹವಾಗುತ್ತಿದ್ದಾರೆ. ಆದರೆ ಮದುವೆಗೆ ಕೆಲವೇ ಕೆಲವು ಮಂದಿ ಸ್ನೇಹಿತರು,  ಸಂಬಂಧಿಕರಿಗೆ ಮಾತ್ರ ಆಹ್ವಾನವಂತೆ.