ಲಾಕ್ ಡೌನ್ : 100 ಕಿ. ಮೀ ನಡೆದೇ ಸಾಗಿದ ಗರ್ಭಿಣಿ ವಲಸೆ ಕಾರ್ಮಿಕ ಮಹಿಳೆಗೆ ಹೆರಿಗೆ, ಮಗು ಸಾವು – Kannada News Now


India

ಲಾಕ್ ಡೌನ್ : 100 ಕಿ. ಮೀ ನಡೆದೇ ಸಾಗಿದ ಗರ್ಭಿಣಿ ವಲಸೆ ಕಾರ್ಮಿಕ ಮಹಿಳೆಗೆ ಹೆರಿಗೆ, ಮಗು ಸಾವು

ಅಂಬಾಲಾ: ಪಂಜಾಬ್ ನ ಲುಧಿಯಾನಾದಿಂದ 100 ಕಿಲೋ ಮೀಟರ್ ಗೂ ಅಧಿಕ ದೂರ ನಡೆದು ಸಾಗಿದ ಗರ್ಭಿಣಿ ವಲಸೆ ಕಾರ್ಮಿಕ ಮಹಿಲ್ಯೊಬ್ಬರಿಗೆ ಹರ್ಯಾಣದ ಅಂಬಾಲಾದಲ್ಲಿ ಹೆರಿಗೆಯಾಗಿ ಮಗು ಮೃತಪಟ್ಟ ಘಟನೆ ನಡೆದಿದೆ.

ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಂಜಾಬ್ ನ ಲುಧಿಯಾನಾದಿಂದ ಕಳೆದ ವಾರ ಬಿಹಾರದ ತಮ್ಮ ಗ್ರಾಮಕ್ಕೆ ಹೋಗಲು ಕಾಲ್ನಡಿಗೆಯಲ್ಲಿಯೇ ಹೊರಟಿದ್ದ ಬಿಂದಿಯಾ ಮತ್ತು ಆಕೆಯ ಪತಿ ಜಟಿನ್ ರಾಮ್ ಕಳೆದ ಬುಧವಾರ ಅಂಬಾಲಾ ತಲುಪಿದರು. ಅಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಕ್ಷಣವೇ ಮಗು ಅಸುನೀಗಿದೆ.

ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಇದು ಮೊದಲ ಮಗು. ಕಳೆದ ವರ್ಷ ಬಿಹಾರದಿಂದ ಲುಧಿಯಾನಾಕ್ಕೆ ಬಂದಿದ್ದ ದಂಪತಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.