TREANDING : ಈ ಪುಟ್ಟ ಬಾಲಕನ ಶಾಸ್ತ್ರೀ ಸಂಗೀತದ ಹಾಡು ಈಗ ಪುಲ್ ವೈರಲ್ – Kannada News Now


India

TREANDING : ಈ ಪುಟ್ಟ ಬಾಲಕನ ಶಾಸ್ತ್ರೀ ಸಂಗೀತದ ಹಾಡು ಈಗ ಪುಲ್ ವೈರಲ್

ಪುಟ್ಟ ಬಾಲಕನೊಬ್ಬ ಹಾರ್ಮೋನಿಯಂ ನುಡಿಸುತ್ತಾ ವ್ಯಕ್ತಿಯೊಬ್ಬರು ಹೇಳಿಕೊಡುವ ಸ್ವರಾಲಾಪನೆಯನ್ನು ಮಧುರವಾಗಿ ಹೇಳುತ್ತಾ, ಶಾಸ್ತ್ರೀಯ ಸಂಗೀತದ ದಾಟಿಯಲ್ಲಿ ಹಾರ್ಮೋನಿಯಂ ನುಡಿಸುವಾತ ಹೇಳಿಕೊಟ್ಟಂತೆ ಹೇಳುತ್ತಾ ಹೋದ್ರೇ.. ಹಾಡುವ ಪರಿ ಸೋಷಿಯಲ್ ಮೀಡಿಯಾ ನೋಡುಗರನ್ನು ಅತ್ಯಾಕರ್ಷಿಸಿದೆ. ಈ ಮೂಲಕ ವೈರಲ್ ಕೂಡ ಆಗಿದೆ.

ಪತ್ರಕರ್ತೆ ಸಂಧ್ಯಾ ಅವರು ತಮ್ಮ ತಂದೆಯೊಂದಿಗೆ ಮನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ತಂದೆಯೊಂದಿಗೆ ಸೇರಿ, ಆ ಪುಟ್ಟ ಬಾಲಕನು ಹಾಡುವಂತ ಮೂರು ಕ್ಲಿಪ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಇಂತಹ ಪೋಸ್ಟ್ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಸೃಷ್ಠಿಸಿಬಿಟ್ಟಿದೆ.

ವೀಡಿಯೋ ಹಾಕಿದಂತ ಕೇವಲ ಎರಡೇ ಗಂಟೆಯಲ್ಲಿ 24 ಸಾವಿರಕ್ಕೂ ಹೆಚ್ಚು ನೋಡುಗರು ವೀಡಿಯೋವನ್ನು ವೀಕ್ಷಿಸಿದ್ದಾರೆ.

ವೈರಲ್ ವಿಡಿಯೋಗಳಲ್ಲಿ, ಪುಟ್ಟ ಬಾಲಕ ತನ್ನ ತಂದೆಯೊಂದಿಗೆ ಸೇರಿ ಶಾಸ್ತ್ರೀಯ ಹಾಡೊಂದನ್ನು ಹಾಡಿದ್ದಾನೆ. ತಂದೆ ಹಾರ್ಮೋನಿಯಂ ನುಡಿಸುತ್ತಿದ್ದರೇ, ಈ ಮಧ್ಯೆ ಪುಟ್ಟ ಬಾಲಕ ತನ್ನ ಕಂಠಸಿರಿಯಲ್ಲಿ, ತಾಳವನ್ನು ಪರಿಪೂರ್ಣಗೊಳಿಸುವತ್ತ ಗಮನ ಹರಿಸಿದೇ, ಹಾಡುತ್ತಿದ್ದಾನೆ. ಈ ನಡುವೆ, ಮಗು ತನ್ನ ತಂದೆ ರಾಗಗಳ ಜೊತೆ ತುಂಬಾ ವೇಗವಾಗಿ ಹೋಗುತ್ತಿದೆ ಎಂದು ಭಾವಿಸಿ, ತಕ್ಷಣ ತಂದೆಗೆ ಅಡ್ಡಬಂದು , “ನಿಧಾನಗತಿಯಾಗಿ ಹಾಡುವಂತೆಯೂ ಹೇಳುತ್ತಾನೆ.

ಇಂತಹ ವೀಡಿಯೋ ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಪುಟ್ಟ ಬಾಲಕನ ಹಾಡುವ ಪರಿಗೆ ನೋಡುಗರು ಫಿದಾ ಆಗಿದ್ದಾರೆ.

 




error: Content is protected !!