ನವದೆಹಲಿ : ಕೇಂದ್ರ ಸರಕಾರ ರೈತರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೂ ಸೇರಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ ಪಡೆದ ಮೊತ್ತವನ್ನ ನೇರವಾಗಿ ರೈತರ ಕುಟುಂಬಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಇದುವರೆಗೆ 12 ಕಂತುಗಳಲ್ಲಿ ರೈತರಿಗೆ ನಗದು ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಆದರೆ 13ನೇ ಕಂತಿನ ಹಣ ನಿಮ್ಗೆ ಸಿಗುತ್ತದೆಯೇ.? ಇಲ್ಲವೇ.? ಅನ್ನೋ ಅನುಮಾನ ನಿಮ್ಮನ್ನ ಕಾಡ್ತಿದ್ಯಾ.? ಹಾಗಿದ್ರೆ, ಈ ರೀತಿ ಆನ್ಲೈನ್ನಲ್ಲಿ ಪರಿಶೀಲಿಸಿ.
ರೈತರಿಗೆ ಮತ್ತಷ್ಟು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಪ್ರಾರಂಭಿಸಿತು. ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ತಲಾ ರೂ.2 ಸಾವಿರದಂತೆ ಮೂರು ಕಂತುಗಳಲ್ಲಿ ಪ್ರತಿ ವರ್ಷ ರೂ.6 ಸಾವಿರ ನಗದು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯಡಿ ಸುಮಾರು 11 ಕೋಟಿ ರೈತರಿಗೆ ಸರ್ಕಾರ 2.2 ಲಕ್ಷ ಕೋಟಿ ರೂಪಾಯಿಗಳನ್ನ ವರ್ಗಾಯಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಹೇಳಿದ್ದಾರೆ.
ನೀವು ಫಲಾನುಭವಿಗಳ ಪಟ್ಟಿಯಲ್ಲಿ ನೀವು ಇದ್ದೀರೋ ಇಲ್ಲವೋ ಎಂಬುದನ್ನ ಪರಿಶೀಲಿಸಿ.!
– PM ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ https://pmkisan.gov.in ಗೆ ಹೋಗಿ
– ಮುಖಪುಟದಲ್ಲಿ ‘ಫಾರ್ಮರ್ಸ್ ಕಾರ್ನರ್’ ಆಯ್ಕೆಗೆ ಹೋಗಿ.
– ರೈತರ ಕಾರ್ನರ್ ಮೆನುವಿನಿಂದ ಫಲಾನುಭವಿಗಳ ಪಟ್ಟಿ ಆಯ್ಕೆಯನ್ನ ಆರಿಸಿ.
– ಡ್ರಾಪ್-ಡೌನ್ ಮೆನುವಿನಿಂದ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಗ್ರಾಮವನ್ನು ಆಯ್ಕೆಮಾಡಿ.
– ‘ವರದಿ ಪಡೆಯಿರಿ’ ಆಯ್ಕೆ ಮಾಡಿ.
– ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.
ಈ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಮಸ್ಯೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ 011-23381092 ಅನ್ನು ಸಂಪರ್ಕಿಸಿ. ಇಲ್ಲದಿದ್ದರೆ pmkisan-ict@gov.in ಗೆ ಮೇಲ್ ಮಾಡಿ.
ಜಮೀರ್ ಅಹಮದ್ ಅವರೇ, ನಿಮಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ.? – HDK ಪ್ರಶ್ನೆ