BREAKING : ಮದ್ಯ ನೀತಿ ಹಗರಣ : ದೆಹಲಿ ಮಾಜಿ ಡಿಸಿಎಂ ‘ಮನೀಶ್ ಸಿಸೋಡಿಯಾ’ ಜಾಮೀನು ಅರ್ಜಿ ವಜಾ

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನ ರೂಸ್ ಅವೆನ್ಯೂ ನ್ಯಾಯಾಲಯ ತಿರಸ್ಕರಿಸಿದೆ. ಈ ಹಿಂದೆ ಕೆಳ ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎಲ್ಲವೂ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ್ದವು. ಜಾಮೀನನ್ನು ವಿರೋಧಿಸಿದ ತನಿಖಾ ಸಂಸ್ಥೆಗಳು, ಸಿಸೋಡಿಯಾ ಹಗರಣದ ಕಿಂಗ್ಪಿನ್ ಮತ್ತು ಅವರಿಗೆ ಜಾಮೀನು ನೀಡಬಾರದು ಎಂದು ಹೇಳಿತ್ತು. ಅವರಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯಗಳನ್ನು ತಿರುಚಲು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಕಾರಣವಾಗಬಹುದು ಎಂದಿದೆ.   … Continue reading BREAKING : ಮದ್ಯ ನೀತಿ ಹಗರಣ : ದೆಹಲಿ ಮಾಜಿ ಡಿಸಿಎಂ ‘ಮನೀಶ್ ಸಿಸೋಡಿಯಾ’ ಜಾಮೀನು ಅರ್ಜಿ ವಜಾ