ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಶುಗರ್‌ ಇದ್ದವರು ತಮ್ಮ ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆಗಳನ್ನು ಅನಿವಾರ್ಯವಾಗಿ ಹಾಗು ಕಡ್ಡಾಯವಾಗಿ ಬದಲಾಯಿಸಿಕೊಳ್ಳಲೇಬೇಕು. ಇವರು ತಮ್ಮ ಆರೋಗ್ಯ ಹಾಗು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಕ್ತದಲ್ಲಿ ಶುಗರ್‌ ಲೆವಲ್‌ ಹೆಚ್ಚಿದ್ದರೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವುದು, ಬೇಗನೇ ಹಸಿವಾಗೋದು, ತಲೆ ಸುತ್ತುವುದು, ಬಾಯಾರಿಕೆ ಹೀಗೆ ಅನೇಕ ಸಮಸ್ಯೆಗಳು ಇರುತ್ತವೆ. ಇನ್ನು ಮಧುಮೇಹ ರೋಗಿಗಳಲ್ಲಿ ಮೂತ್ರಪಿಂಡ ವೈಫಲ್ಯ, ಹೃದಯಾಘಾತದಂತಹ ಅಪಾಗಳೂ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಇಂತಹ ಅಪಾಯದಿಂದ ದೂವಿರಬಹುದು.

ದೇಹದಲ್ಲಿ ಶುಗರ್‌ ಲೆವಲ್‌ ಹೆಚ್ಚಿದ್ದರೆ ಹಾಲಿನೊಂದಿಗೆ ಚಿಟಕೆ ಅರಿಶಿನ ಹಾಗು ದಾಲ್ಚಿನ್ನಿ ಪುಡಿ ಬೆರಸಿ ಕುಡಿದರೆ ನಿಮಗೆ ಉತ್ತಮ ಪ್ರಯೋಜನೆ ಸಿಗುತ್ತದೆ. ವೈದ್ಯರು ಹೇಳುವ ಪ್ರಕಾರ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್‌ ಡಿ, ಸತು, ಪೊಟ್ಯಾಸಿಯಮ್‌ ಇರುತ್ತದೆ. ಈ ಎಲ್ಲಾ ಅಂಶಗಳು ಇರುವ ಹಾಲಿನೊಂದಿಗೆ ಅರಿಶಿನ ಹಾಗು ದಾಲ್ಚಿನ್ನಿ ಸೇವನೆ ಶುಗರ್‌ ಲೆವಲ್‌ ಕಡಿಮೆ ಮಾಡುವಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ ಅಂತೆ.

ಅರಿಶಿನ ಆಂಟಿ ಬ್ಯಾಕ್ಟಿರಿಯಲ್‌ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ, ಆಂಟಿಫಂಗಲ್‌ ಲಕ್ಷಣಗಳನ್ನು ಇದು ಹೊಂದಿದೆ. ಅರಿಶಿನದಲ್ಲಿ ಫೈಬರ್‌, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ ಹೀಗೆ ಇನ್ನೂ ಅನೇಕ ಪೋಷಕಾಂಶಗಳಿರುತ್ತವೆ. ಹಾಗಾಗಿ ಹಾಲು ಮತ್ತು ಅರಿಶಿನ ಮಧುಮೇಹ ರೋಗಿಗಳು ಉತ್ತಮ ಮನೆಮದ್ದಾಗಿದೆ ಎಂದು ವೈದ್ಯರು ಹೇಳುತ್ತಾರೆ. ಇನ್ನು ದಾಲಚಿನ್ನಿಯಲ್ಲಿ ಸಹ ಪೊಟ್ಯಾಶಿಯಮ್‌ ಹಾಗು ಅನೇಕ ವಿಟಾಮಿನ್‌ಗಳು ಹೇರಳವಾಹಿರುತ್ತವೆ. ಹೀಗಾಗಿ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ಅರಿಶಿನ, ದಾಲ್ಚಿನ್ನಿ ಸೇರಿಸಿ ಕುಡಿದರೆ ದೇಹದಲ್ಲಿನ ಶುಗರ್‌ ಲೆವಲ್‌ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ ರೋಗಿಗಳು ಯಾವುದಕ್ಕೂ ತಮ್ಮ ರೆಗ್ಯುಲರ್‌ ಡಾಕ್ಟರ್‌ ಬಳಿ ಸಲಹೆ ತೆಗೆದುಕೊಂಡು ಹಾಲು ಅರಿಶಿನ ಹಾಗು ದಾಲ್ಚಿನ್ನಿಯನ್ನು ಸೇವಿಸಿದರೆ ಉತ್ತಮ ಎಂದು ಸಲಹೆ ನೀಡುತ್ತೇವೆ.

 

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

Share.
Exit mobile version