ಮೈಸೂರಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ, ಮಗು ಮೇಲೆ ಚಿರತೆ ದಾಳಿ: ಗಂಭೀರ ಗಾಯ

ಮೈಸೂರು: ಜಿಲ್ಲೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ದಂಪತಿಗಳು, ಮಗುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಬೈಕ್ ನಿಂದ ಕೆಳಗೆ ಬಿದ್ದಂತ ದಂಪತಿಗಳು, ಮಗು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಬಳಿಯಲ್ಲಿ ಈ ಘಟನೆ ನಡೆದಿದೆ. ಚಿರತೆ ದಾಳಿಯಿಂದಾಗಿ ರೈತ ಮಹದೇವಸ್ವಾಮಿ, ಪತ್ನಿ, ಮಗುವಿಗೆ ಗಾಯವಾಗಿದೆ. ಗಾಯಾಳುಗಳ್ನು ತಗಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಮನುಷ್ಯರ … Continue reading ಮೈಸೂರಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ, ಮಗು ಮೇಲೆ ಚಿರತೆ ದಾಳಿ: ಗಂಭೀರ ಗಾಯ