ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ದೂರ ಮಾಡುವ ಜಾದೂ ಅಡಗಿದೆ ಇದರಲ್ಲಿ… – Kannada News Now


Beauty Tips Lifestyle

ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ದೂರ ಮಾಡುವ ಜಾದೂ ಅಡಗಿದೆ ಇದರಲ್ಲಿ…

ಸ್ಪೆಷಲ್ ಡೆಸ್ಕ್ : ಅಂದವಾಗಿ ಕಾಣಲು ಮೊದಲಿಗೆ ತ್ವಚೆ ಕೋಮಲತೆಯನ್ನು ಹೆಚ್ಚಿಸಿಕೊಳ್ಳಲೇ ಬೇಕು. ಅದಕ್ಕಾಗಿ ನಾವು ಏನೆನೋ ವಿಧಾನಗಳನ್ನು ಪಾಲಿಸುತ್ತೇವೆ. ನೀವು ಬೇರೆ ಯಾವುದೋ ಚಿಕಿತ್ಸೆ, ಔಷಧಗಳಿಗೆ ಮೊರೆ ಹೋಗುವ ಬದಲು ಸರಳವಾದ ನೈಸರ್ಗಿಕ ವಿಧಾನದ ಮೂಲಕ ಚರ್ಮವನ್ನು ರಕ್ಷಿಸಿ ಅದರ ಹೊಳಪನ್ನು ಉಳಿಸಿಕೊಳ್ಳಬಹುದು.ಅದು ಲೆಮನ್ ಗ್ರಾಸ್ ನಿಂದ ಸಾಧ್ಯ.

ಏನಿದು ಲೆಮನ್ ಗ್ರಾಸ್ : ಇದೊಂದು ವಿಶಿಷ್ಟ ರೀತಿಯ ಹುಲ್ಲು. ಇದನ್ನು ಮಜ್ಜಿಗೆ ಹುಲ್ಲು ಎಂದು ಸಹ ಕರೆಯಲಾಗುತ್ತದೆ. ಇದರ ಪರಿಮಳ ನಿಂಬೆಯಂತೆ ಇರೋದರಿಂದ ಇದಕ್ಕೆ ಲೆಮನ್ ಗ್ರಾಸ್ ಎಂದು ಕರೆಯಲಾಗುತ್ತದೆ. ಇದನ್ನು ಉಪಯೋಗಿಸುವುದರಿಂದ ಮೊಡವೆ, ಕಲೆ ಸೇರಿದಂತೆ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ಒಟ್ಟಾರೆ ತ್ವಚೆ ಮತ್ತು ಕೂದಲ ಆರೋಗ್ಯವನ್ನು ಕಾಪಾಡುತ್ತದೆ. ಈ ಲೆಮನ್ ಗ್ರಾಸ್ ನಿಂದ ಮಾಡಿದಂತಹ ಸೋಪ್ ನಿಂದ ಉಂಟಾಗುವ ಪ್ರಯೋಜನಗಳೇನು ನೋಡೊಣ…

ತ್ವಚೆಗೆ :ಲೆಮನ್ ಗ್ರಾಸ್ ನ ಸೋಪ್ ಟೋನರ್‌ನಂತೆ ಕೆಲಸ ಮಾಡುತ್ತದೆ. ಇದು ಮುಖದ ಗುಳಿಗಳನ್ನು ಕಡಿಮೆ ಮಾಡುತ್ತದೆ. ನಿರಂತರವಾಗಿ ಲಿಂಬೆ ಹುಲ್ಲಿನ ಸೋಪನ್ನು ಮುಖಕ್ಕೆ ಹಚ್ಚುವುದರಿಂದ ಚಿಕ್ಕ ಚಿಕ್ಕ ಗೆರೆ, ನೆರಿಗೆ ಸೇರಿದಂತೆ ವಯಸ್ಸಾಗುವಿಕೆಯನ್ನು ತೋರಿಸುವ ಲಕ್ಷಣಗಳು ಕಡಿಮೆಯಾಗುತ್ತವೆ.

ಕೂದಲ ಆರೋಗ್ಯ ರಕ್ಷಣೆ : ಲೆಮನ್ ಗ್ರಾಸ್ ಕೂದಲ ಶುಚಿತ್ವದ ಏಜೆಂಟ್ ಆಗಿ ವರ್ತಿಸುತ್ತದೆ. ನಾನಾ ಎಣ್ಣೆಗಳ ಜೊತೆಗೆ ಇದನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಬೇಕು. ಉದಾಹರಣೆಗೆ ಬೇವಿನ ಎಣ್ಣೆ, ಕ್ಯಾಂಫರ್ ಅಥವಾ ಏಕಲೈಪ್ಟಸ್ ಎಣ್ಣೆಯ ಜೊತೆ ಮಿಶ್ರಣ ಮಾಡಿ ತಲೆ ಹಚ್ಚಿಕೊಂಡರೆ ಹೇನು ಮತ್ತು ಹಲವು ವಿಧದ ನೆತ್ತಿಯ ಸೋಂಕನ್ನು ತಡೆಯುತ್ತದೆ.

ದೇಹದ ವಾಸನೆ ನಿವಾರಣೆ : ನಿಯಮಿತವಾಗಿ ಲೆಮನ್ ಗ್ರಾಸ್ ಸೋಪ್ ಬಳಸುವುದರಿಂದ ತೀರಾ ಹೆಚ್ಚು ಬೆವರುವಿಕೆ ಮತ್ತು ಬೆವರು ದುರ್ವಾಸನೆಯಿಂದ ಬಳಲುತ್ತಿರುವವರು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮುಂದಿನ ತ್ವಚೆಯ ರಕ್ಷಣೆಯ ವಿಷಯ ಬಂದಾಗ ಬೇರೆ ಚಿಕಿತ್ಸೆಯ ಮೊರೆ ಹೋಗಬೇಡಿ. ಲೆಮನ್ ಗ್ರಾಸ್ ಬಳಸಿ ಚೆನ್ನಾಗಿ ಸ್ನಾನ ಮಾಡಿ ಚರ್ಮವು ಹೊಳಪು ಆರೋಗ್ಯದಿಂದ ಇರಲು ಸಾಹಯವಾಗಿದೆ.