ಬೆಂಗಳೂರು: ಇದುವರೆಗೆ ಇಳಿಕೆಯ ಗತಿಯಲ್ಲಿ ಸಾಗಿದ್ದಂತ ಕೊರೋನಾ ಸೋಂಕಿನ ( Coronavirus Case ) ಪ್ರಕಣಗಳ ಸಂಖ್ಯೆ, ರಾಜ್ಯದಲ್ಲಿ ಎರಡು ವಾರಗಳಿಂದ ಏರುಗತಿಯಲ್ಲಿ ಸಾಗುತ್ತಿವೆ. ವಾರದಿಂದ ವಾರಕ್ಕೆ ಏರಿಕೆಯಾಗುತ್ತಿರುವಂತ ಕೋವಿಡ್ ಕೇಸ್ ( Covid19 Case ) ನಿಂದಾಗಿ ಕರ್ನಾಟಕದಲ್ಲಿ ಕೊರೋನಾ 3ನೇ ಅಲೆ ( Corona 3rd Wave ) ಆರಂಭವಾಗಿ ಬಿಡ್ತಾ ಅನ್ನೋ ಭೀತಿಯನ್ನು ಹುಟ್ಟು ಹಾಕಿದೆ.
MLC Election: ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯವಿಲ್ಲ: ಜೆಡಿಎಸ್ ಗೆ ಟಾಂಗ್ ಕೊಟ್ಟ ಬಿಜೆಪಿ ಸಂಸದ
ರಾಜ್ಯದಲ್ಲಿ ನವೆಂಬರ್ ಮೊದಲ ವಾರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 231 ಆಸುಪಾಸಿನಲ್ಲೇ ಸಾಗಿತ್ತು. ಈ ವಾರದಲ್ಲಿ ಶೇ.11.69ರಷ್ಟು ಸೋಂಕಿನ ಪ್ರಕರಣಗಳ ದರ ಹೆಚ್ಚಳವಾಗಿತ್ತು. ಆ ಬಳಿಕ ಎರಡನೇ ವಾರದಲ್ಲಿ 258 ಆಸುಪಾಸಿನಲ್ಲಿ ಇದ್ದು ಇಳಿಕೆ ಕಂಡಿತ್ತು. ಆದ್ರೇ ನವೆಂಬರ್ 3ನೇ ವಾರದಲ್ಲಿ ಮತ್ತೆ ಹೆಚ್ಚಳಗೊಂಡಿದೆ.
BIG BREAKING NEWS: ‘ಪರಿಷತ್ ಚುನಾವಣೆ’ಯಲ್ಲಿ ‘ಬಿಜೆಪಿ ಜತೆ ಜೆಡಿಎಸ್ ಮೈತ್ರಿ’ಯಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ
ನವೆಂಬರ್ 3ನೇ ವಾರದಿಂದ ಏರುಗತಿಯಲ್ಲಿ ಮುಂದುವರೆದ ಕೊರೋನಾ 306 ಕ್ಕೂ ಹೆಚ್ಚು ದಿನಂಪ್ರತಿ ಕೇಸ್ ಗಳು ಪತ್ತೆಯಾಗೋದಕ್ಕೆ ಶುರುವಾಯ್ತು. ಇದರ ಶೇಕಡವಾರು ಪ್ರಮಾಣ 23.89 ರಷ್ಟು ಆಗಿದೆ. ಇದಾದ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ 390 ಕೇಸ್ ಗಳು ಪತ್ತೆಯಾಗೋ ಮೂಲಕ ಶೇ.27.45ರಷ್ಟು ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಈ ಮೂಲಕ ದಿನಂಪ್ರತಿ ಕೊರೋನಾ ಪ್ರಕರಣಗಳ ಸಂಖ್ಯೆ ಕಳೆದ ಎರಡು ವಾರಗಳಿಂದ ಹೆಚ್ಚಳಗೊಂಡಿವೆ.
ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಕ್ರಮ – ಸಿಎಂ ಬಸವರಾಜ ಬೊಮ್ಮಾಯಿ
ಈ ಹಿನ್ನಲೆಯಲ್ಲಿಯೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡು, ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತ ಕ್ರಮವನ್ನು ಅಳವಡಿಸಿಕೊಳ್ಳಿ. ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
After falling for 6 straight months, Covid numbers are seeing an uptick over the last two weeks in Karnataka.
Caution is the word! Mask up Karnataka! #COVID19#Omicron @BSBommai @mansukhmandviya pic.twitter.com/ELHBktThTC— Dr Sudhakar K (@mla_sudhakar) December 6, 2021