ಕೆಎನ್ಎನ್ ಡಿಜಿಟಲ್ ಡೆಸ್ಕ್ : ನವೆಂಬರ್ 8ರ ಇಂದು ಚಂದ್ರಗ್ರಹ ಆರಂಭಗೊಂಡಿದೆ. ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಉತ್ತರ ಅಮೇರಿಕಾದ ಪಶ್ಚಿಮ ಭಾಗ, ಪೂರ್ವ ರಷ್ಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಲಿದೆ ಮತ್ತು ಭಾರತದ ಪೂರ್ವ ಭಾಗದಲ್ಲಿನ ಅಗರ್ತಲಾ, ಭುವನೇಶ್ವರ್, ಡಾರ್ಜಿಲಿಂಗ್, ಗುವಾಹಟಿ, ಪೋರ್ಟ್ ಬ್ಲೇರ್ ಮುಂತಾದ ಪ್ರದೇಶಗಳಲ್ಲಿಯೂ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಿದೆ.

BIG NEWS: ನ.11ರಿಂದ 13ರವರೆಗೆ ‘ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ’: ‘ಶಾಲಾ-ಕಾಲೇಜು ಶಿಕ್ಷಕ’ರಿಗೆ OODಗೆ ಅನುಮತಿ

ಚಂದ್ರಗ್ರಹಣವು ಪಾರ್ಶ್ವವಾಗಿ ಗೋಚರಿಸುತ್ತಿದ್ದು, ಭೂಮಿಯ ಛಾಯಾ ಪ್ರದೇಶದಲ್ಲಿ ಕೇವಲ ಚಂದ್ರನ ಒಂದು ಭಾಗವಷ್ಟೇ ಹಾದುಹೋಗುವುದರಿಂದ ಈ ಪಾರ್ಶ್ವ ಚಂದ್ರಗ್ರಹಣದ ಗೋಚರತೆಗೆ ಕಾರಣವಾಗಿರುತ್ತದೆ. ಪಾರ್ಶ್ವ ಚಂದ್ರಗ್ರಹಣವು ಕರ್ನಾಟಕದಲ್ಲಿ ಸಂಜೆ 05 ಗಂಟೆ 46 ನಿಮಿಷಕ್ಕೆ ಆರಂಭವಾಗುತ್ತಿದ್ದು, 5 ಗಂಟೆ 57 ನಿಮಿಷಕ್ಕೆ ಗರಿಷ್ಠ ಮಟ್ಟವನ್ನು ತಲುಪಿ, 7 ಗಂಟೆ 26 ನಿಮಿಷಕ್ಕೆ ಕೊನೆಗೊಳ್ಳುತ್ತದೆ.

LIC Policy : ‘LIC’ಯಿಂದ ಅತ್ಯುತ್ತಮ ಯೋಜನೆ.! ಇದ್ರಲ್ಲಿ ಒಮ್ಮೆ ಇನ್ವೆಸ್ಟ್ ಮಾಡಿದ್ರೂ, ತಿಂಗಳಿಗೆ ₹20,000 ಸಿಗುತ್ತೆ

ಆದರೆ ಗ್ರಹಣದ ಗೋಚರ ಅವಧಿಯು ಕೇವಲ 33 ನಿಮಿಷಗಳಾಗಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಬರಿಗಣ್ಣಿನಿಂದ ಅಥವಾ ದೂರದರ್ಶಕದ ಮೂಲಕ ವೀಕ್ಷಿಸುವುದನ್ನು ಮರೆಯಬೇಡಿ.

Share.
Exit mobile version