ಕೇರಳ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಂಗಲ್ಲೂರ್ ಪಟ್ಟಣದ ನಿವಾಸಿಗಳು ಈ ಪ್ರದೇಶದಲ್ಲಿ ಕ್ವಾರಿಯೊಂದರ ಬಳಿ ಸ್ಫೋಟಕಗಳ ದೊಡ್ಡ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಆಗಸ್ಟ್ 4 ಬುಧವಾರದಂದು ಘಟನೆ ಬೆಳಕಿಗೆ ಬಂದಿದೆ.

ಪ್ರತಿ ಬಾಕ್ಸ್‌ನಲ್ಲಿ 200 ಸ್ಟಿಕ್‌ಗಳಂತೆ 40 ಬಾಕ್ಸ್‌ಗಳಲ್ಲಿ ಸುಮಾರು 8,000 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.

ಅಕ್ಕಪಕ್ಕದ ನಿವಾಸಿಗಳು ಇದನ್ನು ಗಮನಿಸಿ ಶೋರನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಫೋಟಕಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಈ ಕುರಿತಂತೆ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ಸಾರೆ ಎನ್ನಲಾಗುತ್ತಿದೆ.

Share.
Exit mobile version