ಎಂ.ಬಿ.ಬಿ.ಎಸ್, ಬಿ.ಇ ವಿದ್ಯಾರ್ಥಿಗಳೇ ಗಮನಿಸಿ : ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ – Kannada News Now


State

ಎಂ.ಬಿ.ಬಿ.ಎಸ್, ಬಿ.ಇ ವಿದ್ಯಾರ್ಥಿಗಳೇ ಗಮನಿಸಿ : ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಮೈಸೂರು : 2020-21ನೇ ಸಾಲಿನ ಶೇ.24.10%, ಎಸ್.ಎಫ್.ಸಿ ಮುಕ್ತನಿಧಿ ಹಾಗೂ ಪುರಸಭಾ ಸಾಮಾನ್ಯ ನಿಧಿ ಅನುದಾನದಲ್ಲಿ ಬನ್ನೂರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ, ಎಂ.ಬಿ.ಬಿ.ಎಸ್, ಬಿ.ಇ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.

ಚುನಾವಣೆಯಲ್ಲೇ ಯಾರ ಯೋಗ್ಯತೆ ಏನೆಂದು ಬಹಿರಂಗ : ಡಿ.ಕೆ.‌ಸುರೇಶ್‌ಗೆ ಸಚಿವ ಡಾ.ಸುಧಾಕರ್ ಟಾಂಗ್

ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 7 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿದ್ದು, ಅರ್ಜಿಯೊಂದಿಗೆ ತಹಸಿಲ್ದಾರ್‍ರಿಂದ ಪಡೆದಿರುವ ಜಾತಿ ಪ್ರಮಾಣಪತ್ರ ಮತ್ತು ಪ್ರಸ್ತುತ ಸಾಲಿನ ಆದಾಯ ಪ್ರಮಾಣ ಪತ್ರದ ನಕಲು, ರೇಷನ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ನಕಲು ಪ್ರತಿ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಸಕ್ತ ಸಾಲಿನ ವ್ಯಾಸಂಗ ಧೃಢೀಕರಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿಯ ನಕಲು ಪ್ರತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ವ್ಯಾಸಂಗ ಮಾಡುತ್ತಿರುವ ಕಾಲೇಜಿನಿಂದ ಲ್ಯಾಪ್‍ಟಾಪ್ ಪಡೆದಿಲ್ಲದಿರುವ ಧೃಢೀಕರಣ ಪತ್ರ ಹಾಗೂ ಇತ್ತೀಚಿನ 2 ಭಾವಚಿತ್ರವನ್ನು ತಿ.ನರಸೀಪುರ ತಾಲ್ಲೂಕಿನ ಬನ್ನೂರು ಪುರಸಭಾ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021 ವೇಳಾಪಟ್ಟಿ ಪ್ರಕಟ
error: Content is protected !!