ಕೊಪ್ಪಳ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೊಪ್ಪಳದ ಗ್ರಾಮೀಣ ಭಾಗದಲ್ಲಿರುವ ಕೆರೆ ಅಭಿವೃದ್ಧಿಪಡಿಸಲು ಅಮೃತ ಸರೋವರ ಯೋಜನೆ ಆರಂಭಿಸಿದೆ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಕೆರೆಗಳ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

BREAKING NEWS: ಕರ್ನಾಟಕ ಸ್ಟೇಟ್‌ ಫೈರ್‌ & ಎಮರ್ಜೆನ್ಸಿ ಟ್ವಿಟರ್‌ ಖಾತೆ ಹ್ಯಾಕ್‌; ಸೈಬರ್‌ ಕ್ರೈಂ ಪೊಲೀಸರಿಗೆ ದೂರು

 

ಕೊಪ್ಪಳ ತಾಲೂಕಿನ ಬಹದ್ದೂರು ಬಂಡಿ ಗ್ರಾಮದಲ್ಲಿರುವ ಕೋಟೆಗೆ ಹೊಂದಿರುವ ಬೆಟ್ಟದ ಕೆಳಗಿನ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಕೆರೆಯನ್ನು ಆಗಸ್ಟ್ 15ರಂದು ಲೋಕಾರ್ಪಣೆ ಮಾಡಲಾಗಿದೆ. ಲೋಕಾರ್ಪಣೆಯಾದ ಕೇವಲ 45 ದಿನಗಳಲ್ಲಿ ಈ ಕೆರೆಯ ತಡೆಗೋಡೆ ಬಿದ್ದು ಹೋಗಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೆರೆಯನ್ನು ಒಟ್ಟು 42 ಲಕ್ಷ ರೂಪಾಯಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಡೆಗೋಡೆ ಕಾಮಗಾರಿ ಕಳಪೆಯಾಗಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

BREAKING NEWS: ಕರ್ನಾಟಕ ಸ್ಟೇಟ್‌ ಫೈರ್‌ & ಎಮರ್ಜೆನ್ಸಿ ಟ್ವಿಟರ್‌ ಖಾತೆ ಹ್ಯಾಕ್‌; ಸೈಬರ್‌ ಕ್ರೈಂ ಪೊಲೀಸರಿಗೆ ದೂರು

ಈ ಬಗ್ಗೆ ಬಹದ್ದೂರುಬಂಡಿ ಪಿಡಿಒ ಜ್ಯೋತಿರನ್ನು ಕೇಳಿದರೆ ಇತ್ತೀಚಿಗೆ ಭಾರೀ ಮಳೆಯಾಗಿದೆ. ಬೆಟ್ಟದಿಂದ ರಭಸವಾಗಿ ನೀರು ಹರಿದು ಬಂದಿದ್ದರಿಂದ ತಡೆಗೋಡೆ ಕುಸಿದಿದೆ. ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Share.
Exit mobile version