
ಸೌಂದರ್ಯದ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಿ ಉತ್ತಮ ತ್ವಚೆ ನೀಡುತ್ತದೆ ಬೆಂಡೆಕಾಯಿ
ಸ್ಪೆಷಲ್ ಡೆಸ್ಕ್ : ಬೆಂಡೆಕಾಯಿ ಮನೆಯಲ್ಲಿ ಸಾಮಾನ್ಯವಾಗಿ ಮಾಡುವಂತಹ ಆಹಾರ ಪದಾರ್ಥವಾಗಿದೆ. ಇದನ್ನು ಬಾಲ್ಯದಿಂದಲೂ ನಮ್ಮ ತಂದೆ ತಾಯಿಗಳು ನಮ್ಮ ಊಟದ ಡಬ್ಬಿಗಳಲ್ಲಿ ಅದನ್ನು ಪ್ಯಾಕ್ ಮಾಡಿ ಕೊಡುತ್ತಿದ್ದರು. ಈ ಆಹಾರವು ಆರೋಗ್ಯಕ್ಕೆ ಉತ್ತಮ, ಜೊತೆಗೆ, ಇದು ನಮ್ಮ ತ್ವಚೆಯ ಆರೈಕೆ ಮತ್ತು ಕೇಶಆರೈಕೆಗೆ ಅದ್ಭುತ ವಾದ ಪದಾರ್ಥವಾಗಿದೆ ಎಂದು ನಮಗೆ ತಿಳಿದಿರಲಿಲ್ಲ! ಬೆಂಡೆಕಾಯಿ ಬಳಸಿ ತಯಾರಿಸಿದ ಫೇಸ್ ಪ್ಯಾಕ್ ಗಳು ಕಾಂತಿಯುತ ತ್ವಚೆ ಮತ್ತು ಸುಕ್ಕುಗಳಿಗೆ ಅತ್ಯುತ್ತಮವಾಗಿದೆ. ಪ್ರಾಚೀನ ಈಜಿಪ್ಟ್ ನ ಮಹಿಳೆಯರು ಇದನ್ನು ಸೌಂದರ್ಯ ವರ್ಧಕವಾಗಿ ಬಳಸುತ್ತಿದ್ದರು. ಹಾಗಿದ್ದರೆ ಈ ತರಕಾರಿ ನಮ್ಮ ತ್ವಚೆ ಮತ್ತು ಕೂದಲಿಗೆ ಎಷ್ಟು ಉಪಯುಕ್ತ ವಾಗಿದೆ ಎಂಬುದನ್ನು ನೋಡೋಣ ಬನ್ನಿ…
ಹೊಳೆಯುವ ಚರ್ಮಕ್ಕೆ ಬೆಂಡೆಕಾಯಿ ಪುಡಿ
ಬೆಂಡೆಕಾಯಿ ವಿಟಮಿನ್ ಎ, ಸಿ, ಫೋಲೇಟ್ ಮತ್ತು ಕ್ಯಾಲ್ಸಿಯಂ ನಂತಹ ಪೋಷಕಾಂಶಗಳನ್ನು ಸಮೃದ್ಧವಾಗಿ ಹೊಂದಿದೆ. ಇವು ನಮ್ಮ ಚರ್ಮದ ಕೋಶಗಳ ಮೇಲೆ ಕೆಲಸ ಮಾಡಿ, ಅವು ಆರೋಗ್ಯಕರವಾಗಿಸಿ, ನಮ್ಮ ಚರ್ಮಕ್ಕೆ ಸುಂದರ ಕಾಂತಿಯನ್ನು ನೀಡುತ್ತವೆ. ಬೆಂಡೆಕಾಯಿ ಪುಡಿ ಮತ್ತು ನೀರು ಬಳಸಿ ತಯಾರಿಸಲಾಗುವ ಫೇಸ್ ಪ್ಯಾಕ್ ಬಳಸಿದರೆ ಉತ್ತಮ ತ್ವಚೆ ನಿಮ್ಮದಾಗುತ್ತದೆ. ಈ ಎರಡು ಸಾಮಾಗ್ರಿಗಳನ್ನು ಒಂದು ಬೌಲ್ ನಲ್ಲಿ ಮಿಶ್ರಗೊಳಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ಕಾಲ ಹಾಗೆ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಅನ್ನು ಬಳಸಬಹುದು ಆದರೆ ಫಲಿತಾಂಶವನ್ನು ನೋಡಲು ತಾಳ್ಮೆಯಿಂದಿರಿ.
ಹೊಳೆಯುವ ಚರ್ಮಕ್ಕೆ ಬೆಂಡೆಕಾಯಿ ಪ್ಯಾಕ್
ಹೆಚ್ಚಿನ ವಯಸ್ಸಾಗುವಿಕೆ ವಿರೋಧಿ ಸ್ಕಿನ್ ಕೇರ್ ಉತ್ಪನ್ನಗಳು C ಜೀವಸತ್ವವನ್ನು ಒಳಗೊಂಡಿರುತ್ತವೆ, ಇದು ಕಾಲಜನ್ ಅನ್ನು ಹೆಚ್ಚಿಸಲು ಮತ್ತು ಚರ್ಮದ ಅಂಗಾಂಶಗಳನ್ನು ದುರಸ್ತಿಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಪ್ರಮುಖವಾಗಿದೆ. ವಯಸ್ಸಾಗಿಸುವ ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮದೇ ಆದ ಫೇಸ್ ಪ್ಯಾಕ್ ಅನ್ನು ತಯಾರಿಸಲು ಬೆಂಡೆಕಾಯಿ ಬಳಸಿ.
ಬೆಂಗಳೂರಿಗರೇ ಗಮನಿಸಿ: ಫೆ.22 ರಿಂದ 26ರವರೆಗೆ 8 ಗಂಟೆ ವಿದ್ಯುತ್ ಕಡಿತ: ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ..!
ಅದಕ್ಕಾಗಿ ಅಗತ್ಯವಿರುವ ಸಾಮಾಗ್ರಿಗಳು : 6 ಲೇಡಿ ಫಿಂಗರ್ಸ್, 1 ಕಪ್ ನೀರು, 4 ಚಮಚ ಗ್ರೀಕ್ ಮೊಸರು ಅಥವಾ ಹಂಗ್ ಮೊಸರು, 1 ಚಮಚ ಎಕ್ಸ್ ಟ್ರಾ ವರ್ಜಿನ್ ಆಲಿವ್ ಎಣ್ಣೆ
ಹೇಗೆ ಮಾಡುವುದು:
ಬೆಂಡೆಕಾಯಿ ಯನ್ನು ಕತ್ತರಿಸಿ 10 ನಿಮಿಷ ನೀರಿನಲ್ಲಿ ಕುದಿಸಿ. ಒಮ್ಮೆ ಅವು ಮೃದುವಾದ ನಂತರ, ಗ್ರೀಕ್ ಮೊಸರು ಮತ್ತು ಆಲಿವ್ ಎಣ್ಣೆಯನ್ನು ಸೇರಿಸಿ. ನಯವಾಗಿ ಚೆನ್ನಾಗಿ ಬ್ಲೆಂಡ್ ಮಾಡಿ. ಒಮ್ಮೆ ಈ ಪ್ಯಾಕ್ ಅನ್ನು ಒಂದು ವಾರ ಫ್ರಿಜ್ ನಲ್ಲಿಟ್ಟು ನಂತರ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಅನ್ನು ನೀವು ಬಳಸಬಹುದು.
ಮೊಡವೆ ನಿವಾರಣೆ
ಮೊಡವೆಯಿಂದ ಬಳಲುತ್ತಿದ್ದರೆ ಆಗ ಲೇಡಿ ಫಿಂಗರ್ ನ ಜೆಲ್ ಸಹಾಯ ಮಾಡುತ್ತದೆ. ಈ ಜೆಲ್, ಆಂಟಿಫಂಗಲ್, ಆಂಟಿ ಬ್ಯಾಕ್ಟೀರಿಯಲ್, ಅನಲ್ಜೆಸಿಕ್, ಉರಿಯೂತ ನಿವಾರಕ, ಗುಣಗಳು ಮೊಡವೆಗಳ ಚಿಕಿತ್ಸೆಗೆ ಸೂಕ್ತವಾಗಿರುವ ಮರು-ಹೈಡ್ರೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಬೆಂಡೆಕಾಯಿಯಲ್ಲಿ ನೈಸರ್ಗಿಕ ತಂಪುಗೊಳಿಸುವ ಗುಣಗಳಿದ್ದು, ಇದು ಚರ್ಮದಲ್ಲಿ ಹೆಚ್ಚುವರಿ ಸೆಬಮ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮೊಡವೆ ಉಂಟು ಮಾಡುವ ಸೂಕ್ಷ್ಮಾಣುಗಳು ನಮ್ಮ ಚರ್ಮವನ್ನು ಹಾಳುಮಾಡದಂತೆ ತಡೆಯಲು ಇದು ಅತ್ಯುತ್ತಮವಾಗಿದೆ.
ಮುಖ್ಯಮಂತ್ರಿ ಬಳಸುವ ಹೆಲಿಕಾಪ್ಟರ್ ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ ದಂಪತಿಗಳು
ಹೊಳೆಯುವ ಕೂದಲು
ಪ್ರಮುಖ ಪೋಷಕಾಂಶಗಳು ಮತ್ತು ಪ್ರೋಟೀನ್ ಗಳ ಪವರ್ ಹೌಸ್ ಆಗಿರುವ ಲೇಡಿಫಿಂಗರ್ ಸಹಾಯದಿಂದ ಕೂದಲನ್ನು ಹೊಳೆಯುವಂತೆ ಮಾಡಿ. ಸ್ವಲ್ಪ ಹೊತ್ತು ನೀರಿನಲ್ಲಿ ಕುದಿಸಿ ಪಾರದರ್ಶಕ ವಾದ ಆ ಜೆಲ್ ನ್ನು ಸ್ವಲ್ಪ ಸಮಯ ಹಾಗೆಯೇ ಬಿಟ್ಟು ಬಿಡಿ. ಒಮ್ಮೆ ನೀವು ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ, ಕಂಡೀಷನರ್ ಆಗಿ ಬಳಸಿ ಮತ್ತು 25 ನಿಮಿಷಗಳ ನಂತರ ತೊಳೆಯಿರಿ.
ಫ್ರಿಝಿ ಹೇರ್ ಸಲ್ಯೂಷನ್
ಗುಂಗುರು ಕೂದಲನ್ನು ನಿಯಂತ್ರಿಸಲು ಬೆಂಡೆಕಾಯಿಯನ್ನು ಬಳಸಬಹುದು. ಈ ತರಕಾರಿಯು ಕೂದಲನ್ನು ಮೃದುವಾಗಿಸುತ್ತದೆ ಮತ್ತು ಕೂದಲಿನ ಬೇರುಗಳು ಮತ್ತು ಕಿರುಚೀಲಗಳನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯನ್ನೂ ನಿವಾರಣೆ ಮಾಡುತ್ತದೆ.